ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಸ್.ಆರ್.ಪಿ.ಸಿ (ಕೆ.ಎಸ್.ಆರ್.ಪಿ) ಮತ್ತು ಪಿ.ಸಿ (ಐ.ಆರ್.ಬಿ) ಮಹಿಳಾ ಮತ್ತು ಪುರುಷರ 2420 ಹುದ್ದೆಗಳಿಗೆ ಪೊಲೀಸ್ ಕಾನ್ಸ್’ಟೆಬಲ್ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ನವೆಂಬರ್ 22ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ನಡೆಯಲಿದೆ ಎಂದು ಎಸ್.ಪಿ. ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4,147 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, 208 ಕೊಠಡಿಗಳನ್ನು ಮೀಸಲು ಇಡಲಾಗಿದೆ.
ಈ ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜು, ಸಹ್ಯಾದ್ರಿ ಕಲಾ ಕಾಲೇಜು, ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು, ಮೇರಿ ಇಮ್ಯಾಕ್ಯುಲೆಟ್ ಬಾಲಕಿಯರ ಪ್ರೌಢ ಶಾಲೆ, ಆರ್.ಎಂ.ಎಲ್.ನಗರದ ಇಖಾಲಾಸ್ ಆಂಗ್ಲ ಮಾಧ್ಯಮ ಶಾಲೆ, ಸರ್ವೋದಯ ಪಿಯು ಕಾಲೇಜು, ಕಮಲಾ ನೆಹರು ಸ್ಮಾರಕ ಪಿಯು ಕಾಲೇಜು, ಕಸ್ತೂರಬಾ ಮಹಿಳಾ ಪಿಯು ಕಾಲೇಜು, ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿವೆ.