ಸುದ್ದಿ ಕಣಜ.ಕಾಂ
ಶಿವಮೊಗ್ಗ: ನವೆಂಬರ್ ತಿಂಗಳಲ್ಲಿ ಪ್ರತಿ ದಿನ ಕೋವಿಡ್ ಪಾಸಿಟಿವ್’ಗಿಂತ ಗುಣಮುಖರಾದವರ ಸಂಖ್ಯೆಯೇ ಅದೀಕವಾಗಿರುತಿತ್ತು. ಆದರೆ, ಬುಧವಾರ ಸೋಂಕಿತರ ಸಂಖ್ಯೆ 25 ಇದ್ದರೆ, ಗುಣಮುಖರು 19 ಜನರಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ ಕೋವಿಡ್ ಮಹಾಮಾರಿಯಿಂದ 347 ಜನ ಮೃತಪಟ್ಟಿದ್ದಾರೆ.
ಕಾಲೇಜುಗಳು ಆರಂಭವಾಗಿರುವುದರಿAದ ಜಿಲ್ಲೆಯಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಬುಧವಾರ 4,144 ಗಂಟಲು ದ್ರವದ ಮಾದರಿಯನ್ನು ಪಡೆಯಲಾಗಿದ್ದು, 2,596 ವರದಿಗಳುನೆಗೆಟಿವ್ ಬಂದಿವೆ.
ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೊಗ್ಗದಲ್ಲಿ 16, ಭದ್ರಾವತಿ 4, ಶಿಕಾರಿಪುರ 1, ತೀರ್ಥಹಳ್ಳಿ 1, ಸೊರಬ 2, ಸಾಗರ ಮತ್ತು ಹೊಸನಗರದಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೇರೆ ಜಿಲ್ಲೆಯ ಒಂದು ಪ್ರಕರಣ ದೃಢಪಟ್ಟಿವೆ.
178 ಸಕ್ರಿಯ ಪ್ರಕರಣ: ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್’ನಲ್ಲಿ 69 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ 00, ಖಾಸಗಿ ಆಸ್ಪತ್ರೆಯಲ್ಲಿ 16, ಮನೆ ಆರೈಕೆಯಲ್ಲಿ 93 ಜನರಿದ್ದಾರೆ.
I take pleasure in, result in I found just what I was having a look
for. You have ended my 4 day lengthy hunt! God Bless
you man. Have a nice day. Bye https://www.chatruletkaz.com/sliv/onlyfans/