ಕೆಪಿಟಿಸಿಎಲ್ ನೇಮಕಾತಿ ಆದೇಶ ಹಿಂಪಡೆದಿದ್ದಕ್ಕೆ ಬೆಂಗಳೂರಲ್ಲಿ ಭುಗಿಲೆದ್ದ ಆಕ್ರೋಶ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಹುದ್ದೆ ನೇಮಕಾತಿ ಆದೇಶವನ್ನು ರದ್ದುಗೊಳಿಸಿದ್ದೇ ಉದ್ಯೋಗ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Image 2020 11 23 at 7.30.28 PMಬೆಂಗಳೂರಿನ ಕಾವೇರಿ ಭವನ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳು ಕೂಡಲೇ ರದ್ದು ಪಡಿಸಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂಗಳಲ್ಲಿ 1,559 ಹುದ್ದೆಗಳ ನೇಮಕಾತಿ ಆದೇಶವನ್ನು ನವೆಂಬರ್ 21ರಂದು ರದ್ದುಗೊಳಿಸಲಾಗಿತ್ತು.
ಈಗಾಗಲೇ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೋ ಜನ ಉದ್ಯೋಗ ಆಕಾಂಕ್ಷೆಯಲ್ಲಿ ಇರುವಾಗಲೇ ಸರ್ಕಾರ ನೇಮಕಾತಿಯನ್ನೇ ರದ್ದುಗೊಳಿಸಿದ್ದಕ್ಕೆ ಉದ್ಯೋಗ ಆಕಾಂಕ್ಷಿಗಳ ಕನಸುಗಳ ಮೇಲೆ ನೀರು ಎರೆದಂತಾಗಿದೆ. ಇನ್ನೇನು ಪರೀಕ್ಷೆಗೋಸ್ಕರ ಕರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದವರ ಕನಸುಗಳ ಮೇಲೆ ನೀರು ಎರೆದಂತಾಗಿದೆ. ಜತೆಗೆ, ವಿದ್ಯಾರ್ಹತೆ ಇದ್ದರೂ ವಯೋಮಿತಿ ಮೀರುವ ಹಂತದಲ್ಲಿರುವ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸರ್ಕಾರದ ವಿರುದ್ಧ ಕೆಂಡಕಾರಲಾಗುತ್ತಿದೆ. ಕೂಡಲೇ ರದ್ದತಿ ಆದೇಶ ಹಿಂಪಡೆಯಲು ಆಗ್ರಹಿಸಲಾಗಿದೆ.

ರದ್ದತಿ ಆದೇಶದ ವರದಿಗಾಗಿ ಕ್ಲಿಕ್ ಮಾಡಿ: https://www.suddikanaja.com/2020/11/21/kptcl-recruitment-cancel/

Leave a Reply

Your email address will not be published. Required fields are marked *

error: Content is protected !!