ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿಗರ ಪಾಲಿಗೆ ಸೋಮವಾರ ಶುಭ ದಿನವೆಂದೇ ಹೇಳಬಹುದು. ಕಾರಣ, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುವುದಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ ಕೇವಲ ಏಳಕ್ಕೆ ತಲುಪಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜತೆಗೆ, ಟ್ರಿಯೇಜ್ ಆಸ್ಪತ್ರೆಯಲ್ಲಿ ಸಂಖ್ಯೆ ಶೂನ್ಯಕ್ಕೆ ತಲುಪಿದೆ.
ಸೋಮವಾರ 2755 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದು, 2480 ನೆಗೆಟಿವ್ ಬಂದಿವೆ. ಹೊಸದಾಗಿ 22 ಪ್ರಕರಣಗಳು ದೃಢಪಟ್ಟಿವೆ. 29 ಜನ ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 63 ಜನ ಚಿಕಿತ್ಸೆ ಪಡೆಯುತ್ತಿದ್ದರೆ, ಮನೆ ಆರೈಕೆಯಲ್ಲಿ 65 ಜನರಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 9, ಭದ್ರಾವತಿ 4, ಶಿಕಾರಿಪುರ 2, ತೀರ್ಥಹಳ್ಳಿ 2, ಸೊರಬ 1, ಸಾಗರ 4, ಹೊಸನಗರ 0 ಪ್ರಕರಣ ಪತ್ತೆಯಾಗಿದೆ.