ಶಿವಮೊಗ್ಗದಲ್ಲಿ ಆರಂಭವಾಗಲಿದೆ ಕಲುಷಿತ ಬಟ್ಟೆಗಳ ಶುದ್ಧೀಕರಣ ಘಟಕ, ಏನಿದರ ಲಾಭ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನ ಜನರ ಅನುಕೂಲಕ್ಕಾಗಿ ನ.೬ರಂದು ಗೋಪಿ ವೃತ್ತದಲ್ಲಿರುವ ಶ್ರೀನಿಧಿ ಸಿಲ್ಕ್÷್ಸ ಆಂಡ್ ಟೆಕ್ಸ್ಟೈಲ್ಸ್ನಲ್ಲಿ ಕಲುಷಿತ ಬಟ್ಟೆಗಳ ಶುದ್ಧೀಕರಣ ಘಟಕದ ಕೌಂಟರ್ ಆರಂಭವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿಧಿ ಸಿಲ್ಕ್÷್ಸ’ನ ಅಶ್ವಥ್ ನಾರಾಯಣ್, ಜ್ಯೋತಿ ಲ್ಯಾಬ್‌ನ ಫ್ಯಾಬ್ರಿಕೇಷನ್ ಸರ್ವಿಸ್ ಲಿಮಿಟೆಡ್’ನಿಂದ ಸಹಭಾಗಿತ್ವದಲ್ಲಿ ಘಟಕ ಆರಂಭಿಸಲಾಗುತ್ತಿದೆ.
ಗ್ರಾಮಾ0ತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರು ೬ರಂದು ಬೆಳಗ್ಗೆ ೧೦.೩೦ಕ್ಕೆ ಕೌಂಟರ್ ಉದ್ಘಾಟಿಸಲಿದ್ದಾರೆ  ಎಂದು ತಿಳಿಸಿದರು.
ಏನಿದು ಶುದ್ಧೀಕರಣ ಘಟಕ:
ನುರಿತ ತಂತ್ರಜ್ಞರ ಮಾರ್ಗದರ್ಶನ ಮತ್ತು ಸಹಾಯದಿಂದ ಬಟ್ಟೆಗಳನ್ನು ಶುಚಿಗೊಳಿಸಲಾಗುತ್ತದೆ. ಎಷ್ಟೇ ಕೊಳೆಯಾಗಿದ್ದರೂ ಬಟ್ಟೆ ಹೊಸದಾಗಿ ಕಾಣುವಂತೆ ತೊಳೆದು ಗ್ರಾಹಕರಿಗೆ ನೀಡಲಾಗುತ್ತದೆ.
ಗ್ರಾಹಕರ ಬಟ್ಟೆಗೆ ಅಗತ್ಯವಿರುವ ಸ್ಟಾರ್ಚಿಂಗ್, ಡಾರ್ನಿಂಗ್ ಪಾಲಿಷಿಂಗ್, ಸ್ಟೀಮ್ ಐರನ್, ಸಣ್ಣ ಪುಟ್ಟ ರಿಪೇರಿ, ಬ್ಲೀಚಿಂಗ್ ಮತ್ತು ವೈಟನಿಂಗ್, ಪರದೆಗಳು, ಕಾರ್ಪೆಟ್ ಕ್ಲೀನಿಂಗ್, ಸೋಫಾ ಮ್ಯಾರ್ಟಸ್ ಕ್ಲೀನಿಂಗ್ ಇತ್ಯಾದಿ ಸೇವೆ ನೀಡಲಾಗುತ್ತದೆ.
ಹೀಗೆ ಅಪ್ರೋಚ್ ಮಾಡಿ:
ಗ್ರಾಹಕರು ಫೋನ್ ಮಾಡಿದರೆ ಸಿಬ್ಬಂದಿಯೇ ಮನೆಗೆ ಬಂದು ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಶುಭ್ರಗೊಳಿಸಿ ಮನೆಗೆ ತಲುಪಿಸುತ್ತಾರೆ. ಇದುವರೆಗೆ ಅಡುಗೆ ಪದಾರ್ಥಗಳನ್ನು ಹೋಂ ಡೆಲಿವರಿ ಮಾಡಲಾಗುತ್ತಿತ್ತು. ಈಗ ಭಿನ್ನ ಉದ್ಯಮವೊಂದು ಶಿವಮೊಗ್ಗಕ್ಕೆ ಕಾಲಿಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಸ್ಪಾದ ವಿಭಾಗೀಯ ಉಸ್ತುವಾರಿ ಮುನಿಕುಮಾರ್, ಚೇತನ್, ಪ್ರತೀಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!