ಪ್ರತ್ಯೇಕ ನಿಗಮಕ್ಕೆ ದೇವಾಂಗ ಸಮಾಜ ಪಟ್ಟು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ 20 ಲಕ್ಷ ಜನಸಂಖ್ಯೆ ಹೊಂದಿರುವ ದೇವಾಂಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಜಿಲ್ಲಾ ದೇವಾಂಗ ನೇಕಾರ ಯುವ ವೇದಿಕೆ ಆಗ್ರಹಿಸಿದೆ.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ತಾಂತ್ರಿಕತೆ ಯುಗದಲ್ಲಿ ನೇಕಾರಿಕೆಯನ್ನೇ ಮೂಲ ವೃತ್ತಿಯಾಗಿಸಿಕೊಂಡಿರುವ ದೇವಾಂಗ ಸಮಾಜ ಸಂಕಷ್ಟಕ್ಕೆ ಸಿಲುಕಿದೆ. ಶಿಕ್ಷಣ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಮೀಸಲಾತಿ ಸೌಲಭ್ಯದಿಂದಲೂ ವಂಚಿತರಾಗಿದ್ದೇವೆ. ಆದ್ದರಿಂದ, ನಿಗಮ ಸ್ಥಾಪಿಸಬೇಕು ಎಂದು ಯುವ ವೇದಿಕೆ ಮನವಿ ಮಾಡಿದೆ.
ನಿಗಮ ಸ್ಥಾಪಿಸಿ ಅದಕ್ಕೆ 1 ಸಾವಿರ ಕೋಟಿ ರೂ.ಗಳ ನೆರವು ನೀಡಬೇಕು. ಆಂಧ್ರ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಎಂದು ತಿಳಿಸಿದೆ.
ಮುಖಂಡರಾದ ಜೆ.ವೈ.ಸಚಿನ್, ಅರುಣ್, ಆದರ್ಶ, ವೀರಭದ್ರ, ಸಚಿನ್, ಹೇಮಂತ್, ವೇಣು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!