ಅಡ್ವಾಣಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಪತ್ರ

 

 

ಸುದ್ದ ಕಣಜ.ಕಾಂ
ಶಿವಮೊಗ್ಗ: ಬಿಜೆಪಿಯ ಭೀಷ್ಮ, ಸಂಸ್ಥಾಪಕ ಸದಸ್ಯ ಹಾಗೂ ಪಕ್ಷವನ್ನು ಅತ್ಯಂತ ಕಷ್ಟದ ದಿನಗಳಲ್ಲೂ ಹೆಗಲು ನೀಡಿ ಕಟ್ಟಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತನ್ನ ಪಕ್ಷದಲ್ಲೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ.
ಇತ್ತೀಚೆಗೆ ಅಡ್ವಾಣಿ ಅವರು ತಮ್ಮ 93ನೇ ಜನ್ಮದಿನ ಅಚರಿಸಿಕೊಂಡಿದ್ದು, ಈ ಸುಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಅವರಿಗೆ ಶುಭ ಕೋರಿದ್ದಾರೆ. ಜತೆಗೆ, ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
* ಭೀಷ್ಮನ ಬಣ್ಣನೆ: ಅಡ್ವಾಣಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿದ ರೀತಿ ಎದುರಾದ ಸನ್ನಿವೇಶಗಳನ್ನು ಶಂಕರಮೂರ್ತಿ ಅವರು ಮೆಲುಕು ಹಾಕಿದ್ದಾರೆ. ತಮ್ಮ ಬದುಕನ್ನೇ ಸಾರ್ವಜನಿಕ ಬದುಕಿಗೆ ಮುಡುಪಾಗಿಟ್ಟಿರುವ ಅಡ್ವಾಣಿ ಅವರದ್ದು ಎಲ್ಲರೂ ಹೆಮ್ಮೆ ಪಡಬೇಕಾಗಿರುವ ವ್ಯಕ್ತಿತ್ವ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
(ಅಡ್ವಾಣಿ ಬಗ್ಗೆ ಶಂಕರಮೂರ್ತಿ ಏನೆಂದರು?-ವಿಡಿಯೋ ರಿಪೋರ್ಟ್)

Leave a Reply

Your email address will not be published. Required fields are marked *

error: Content is protected !!