Power cut | ಇಂದು,‌ ನಾಳೆ ಅರ್ಧ ಶಿವಮೊಗ್ಗ ಕರೆಂಟ್ ಇರಲ್ಲ,‌ ಯಾವೆಲ್ಲ‌ ಪ್ರದೇಶಗಳಲ್ಲಿ ವ್ಯತ್ಯಯ?

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಂ.ಆರ್.ಎಸ್. 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ ಡಿವಿಜಿ-1 ಬೇ ಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ. 29 ರಂದು ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೆಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಶರ್‍ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

READ | ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ಫೆ.28ರಂದು ವಿದ್ಯುತ್ ಪೂರೈಕೆ ಇರಲ್ಲ,‌ ಕಾರಣವೇನು?

ಭದ್ರಾವತಿ ಕೇಂದ್ರದಲ್ಲಿ ನಿರ್ವಹಣೆ

SHIMOGA: ಎಂ.ಆರ್.ಎಸ್. 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಭದ್ರಾವತಿ ವಿವಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ. 28 ರಂದು ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಎಂ.ಆರ್.ಎಸ್. ವಾಟರ್ ಸಪ್ಲೈ, ಎಂ.ಆರ್.ಎಸ್.ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಜ್ಯೋತಿನಗರ, ವಿದ್ಯಾನಗರ, ಕಂಟ್ರಿಕ್ಲಬ್ ರಸ್ತೆ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ತ್ಯಾವರೆಚಟ್ನಳ್ಳಿ‌ ಕೇಂದ್ರದಲ್ಲಿ ನಿರ್ವಹಣೆ

SHIMOGA: ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಾಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಪೆ. 29 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುವೆಂಪು ನಗರ , ಎನ್.ಇ.ಎಸ್ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿ ನಗರ, ಜೆ.ಎನ್.ಎನ್.ಸಿ ಕಾಲೇಜು, ಪರ್ಪೇಕ್ಟ್ ಆಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ , ಬೊಮ್ಮನಕಟ್ಟೆ ಎ ನಿಂದ ಎಚ್ ಬ್ಲಾಕ್‍ವರೆಗೆ, ಹಳೆಬೊಮ್ಮನಕಟ್ಟೆ, ವಿನಾಯಕ ಬಡಾವಣೆ, ದೇವಂಗಿ 2ನೇ ಹಂತದ ಬಡಾವಣೆ, ಶಾಂತಿನಗರ ಹೊನ್ನಾಳಿರಸ್ತೆ, ತ್ಯಾವರೆಚಟ್ನಹಳ್ಳಿ, ಯು.ಜಿ.ಡಿ, ಶೇಷಾದ್ರಿಪುರಂ, ಲಕ್ಷ್ಮೀ ವೇಂಕಟೇಶ್ವರ ಸಾಮಿಲ್, ತ್ರಿಮೂರ್ತಿ ನಗರ, ನವುಲೆ, ಅಶ್ವತ್ ನಗರ, ಎಲ್.ಬಿ.ಎಸ್ ನಗರ, ಕೀರ್ತಿ ನಗರ, ಬಸವೇಶ್ವರ ನಗರ, ಕೃಷಿ ನಗರ, ತರಳಬಾಳು ಬಡಾವಣೆ, ಸೇವಾಲಾಲ್ ನಗರ, ಡಾಲರ್ಸ್ ಕಾಲೋನಿ, ಪವನಶ್ರೀ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

error: Content is protected !!