ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಮಂಗಳವಾರ ಮಂಗನ ಕಾಯಿಲೆ (ಕೆಎಫ್.ಡಿ- ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸ್ಫೋಟಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಸೇರಿ ಹತ್ತು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
READ | ಮಹಿಳೆ ಬಲಿ ಪಡೆದ ಮಂಗನ ಕಾಯಿಲೆ, ಫಲಕ ನಡದ ನಿರಂತರ ಚಿಕಿತ್ಸೆ, ವೈದ್ಯರೇನು ಹೇಳುತ್ತಾರೆ?
ಎಲ್ಲಿ ಎಷ್ಟು ಪ್ರಕರಣ?
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೂರು, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮತ್ತು ಎನ್.ಆರ್.ಪುರದಲ್ಲಿ ಆರು ಹಾಗೂ ಉತ್ತರ ಕನ್ನಡದಲ್ಲಿ ಒಂದು ಕೆಎಫ್.ಡಿ ಪಾಸಿಟಿವ್ ಬಂದಿದೆ.
ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ಉ.ಕನ್ನಡಗಳಲ್ಲಿ ಇದುವರೆಗೆ 130 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 103 ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 23 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ರಾಜ್ಯದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ.