ರೈತರ ಗುಟರ್’ಗೆ ನಲುಗಿದ ಶಿವಮೊಗ್ಗ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ವಿಧಿಸಿ ಜಾರಿಗೆ ತಂದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸಿದ `ಹೆದ್ದಾರಿ ಬಂದ್’ ಯಶಸ್ವಿಯಾಗಿದೆ. ಮುಕ್ಕಾಲು ಗಂಟೆ ಎಂ.ಆರ್.ಎಸ್. ವೃತ್ತದ ನಾಲ್ಕೂ ಕಡೆ ಕಣ್ಣು ಹಾಯಿಸಿದಷ್ಟು ದೂರ ವಾಹನಗಳ ಸರದಿಯೇ ಕಾಣುತ್ತಿತ್ತು.

ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆಗೆ ಸ್ಪಂದಿಸಿ ರೈತ ಸಂಘಟನೆ, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳು(ಅಂಬೇಡ್ಕರ್‌ವಾದ) ಗುರುವಾರ ಪ್ರತಿಭಟನೆಗಳಿದವು. ಒಂದು ಗಂಟೆಗೂ ಅಧಿಕ ಕಾಲ ಶಿವಮೊಗ್ಗ ದ್ವಾರವೇ ಬಂದ್ ಆದ ಅನುಭವವಾಯಿತು.
ಭೀಕರ ಪ್ರತಿಭಟನೆಗೆ ಕಾರಣ:
ಕೃಷಿ ಮಸೂದೆ, ಕಾರ್ಮಿಕ ಮಸೂದೆ, ಭೂ ಸುಧಾರಣ ಕಾಯಿದೆ ರೈತ ವಿರೋಧಿಯಾಗಿದ್ದು, ಅವುಗಳನ್ನು ಜಾರಿಗೆ ತಾರದಂತೆ ಪರಿಪರಿಯಾಗಿ ಮನವಿ ಮಾಡಿದರೂ ಸುಗ್ರಿವಾಜ್ಞೆ ವಿಧಿಸಿ ಜಾರಿಗೆ ತಂದಿರುವುದೇ ಅನ್ನದಾತನ ಆಕ್ರೋಶಕ್ಕೆ ಕಾರಣ.
ಕೇರಳ, ಪಂಜಾಬ್ ಮಾದರಿ ಅನುಸರಿಸಿ:
ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ಪಂಜಾಬ್’ನAತೆ ಕರ್ನಾಟಕ ಸರಕಾರ ಸಹ  ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಗಿಂತ ಕಡಿಮೆಗೆ ಮಾರಾಟ ಮಾಡುವುದು ಅಪರಾಧವೆಂದು ಘೋಷಿಸಬೇಕು.
ಕೇರಳ ಸರ್ಕಾರ ಮಾದರಿಯಲ್ಲಿ ತರಕಾರಿ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು ಎಂದು ಒಕ್ಕೊರಳಿನಿಂದ ಹೋರಾಟಗಾರರು ಆಗ್ರಹಿಸಿದರು.ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮುಖಂಡ ಎಸ್.ಶಿವಮೂರ್ತಿ, ಇ.ಬಿ.ಜಗದೀಶ್, ಟಿ.ಎಂ. ಚಂದ್ರಪ್ಪ, ಕೆ.ರಾಘವೇಂದ್ರ, ಜ್ಞಾನೇಶ್, ಹಿಟ್ಟೂರು ರಾಜು, ನಾಗರಾಜ್ ಪುರದಾಳ್, ಕೆ.ಎಲ್.ಅಶೋಕ್, ಟಿ.ಎಚ್.ಹಾಲೇಶಪ್ಪ, ಶಿವಕುಮಾರ್ ಸೇರಿ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!