ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ಜುಲೈ 29ರಂದು ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ನರಸಿಂಹ ಬಡಾವಣೆ, ರಾಜಶೇಖರ್ ಪೆಟ್ರೋಲ್ ಬಂಕ್, 100 ಅಡಿ ರಸ್ತೆ, ಸವಿ ಬೇಕರಿ ಹಿಂಭಾಗ, ಪೊಲೀಸ್ ಚೌಕಿ, ಬೊಮ್ಮನಕಟ್ಟೆ ರಸ್ತೆ, ಮೇದಾರಕೇರಿ, ವಿಕಾಸ ಶಾಲೆ, ಶಿವಾಲಯ, ಜೈಲ್ ಕಾಂಪೌಂಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.