ಪ್ರತಿ ಬಾಲ್’ಗೂ ಇಲ್ಲಿ ನಡೆಯುತ್ತೆ ಲಕ್ಷದವರೆಗೂ ಡೀಲ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಐಪಿಎಲ್ ಡೀಲ್ ಈಗ ಶೋಕಿಯಾಗಿ ಮಾರ್ಪಟ್ಟಿದೆ. ದುಡ್ಡು ಇರುತ್ತೋ ಬಿಡುತ್ತೋ ಬೆಟ್ಟಿಂಗ್ ದಂಧೆ ಮಾತ್ರ ಭಾರಿ ಜೋರಾಗಿ ನಡೆಯುತ್ತಿದೆ.
ಪೊಲೀಸರು ಇವರ ವಿರುದ್ಧ ಕದನ ಸಾರಿದ್ದು, ಒಂದು ವಾರದಲ್ಲೇ ಎರಡು ಪ್ರಕರಣಗಳನ್ನು ಭೇದಿಸಿದ್ದಾರೆ.

IMG 20201107 WA0004

ಹೇಗೆ ನಡೆಯುತ್ತೆ ಬೆಟ್ಟಿಂಗ್: .

ಪ್ರತಿ ಬಾಲ್’ಗೆ 1 ಸಾವಿರದಿಂದ 1 ಲಕ್ಷದವರೆಗೆ ಡೀಲ್ ಮಾಡಲಾಗುತ್ತದೆ. ಅದರಲ್ಲಿ ಗೆದ್ದವರು ಬೀಗಿ ಮತ್ತೆ ಹಣ ಕಳೆದುಕೊಳ್ಳುತ್ತಾರೆ. ಜೂಜಿಗಿಂತಲೂ ಮಾರಕವಾಗಿ ಬೆಳೆಯುತ್ತಿದೆ.

ಇಬ್ಬರು ಅರೆಸ್ಟ್: ನಗರದ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ಐಪಿಎಲ್ ಬೆಟ್ಟಿಂಗ್ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್’ಸ್ಪೆಕ್ಟರ್ ಮತ್ತು ಸಿಬ್ಬಂದಿ ಬಂಧಿಸಿ, ಅವರಿಂದ 40 ಸಾವಿರ ರೂ. ನಗದು, ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಮುಹಮ್ಮದ್ ಮಸೂದ್ (43), ಶೇಖರ್ (26) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಫೋಟೊ: ಐಪಿಎಲ್ ಬೆಟ್ಟಿಂಗ್1,2

Leave a Reply

Your email address will not be published. Required fields are marked *

error: Content is protected !!