ರಾಣೆಬೆನ್ನೂರು- ಶಿವಮೊಗ್ಗ ರೈಲ್ವೆ ಕಾಮಗಾರಿ ಏನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಣೆಬೆನ್ನೂರು-ಶಿವಮೊಗ್ಗ ರೈಲ್ವೆ ಮಾರ್ಗದ ಕಾಮಗಾರಿ ಸರ್ವೇ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ರೈತರಿಂದ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ, ಹೊನ್ನಾಳಿ ಶಾಸಕರೇ ಮಧ್ಯಸ್ಥಿತಿಕೆ ವಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಭೇಟಿ ಮಾಡಿದರು. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಭೂಮಿ ಕೊಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಮಂಡಿಸಿದರು.
ರೈಲು ಮಾರ್ಗದ ಯೋಜನೆಗೆ ರೈತರ ಜಮೀನು ವಶಕ್ಕೆ ಪಡೆಯುವ ಮುನ್ನ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.

ಏನಾಯ್ತು ಚರ್ಚೆ, ಪರಿಹಾರ ಸಿಕ್ಕಿತಾ?
ಶಿವಮೊಗ್ಗ ನಗರದಲ್ಲಿ ಜಿಲ್ಲಾಧಿಕಾರಿ ಹಾಗೂ ನ್ಯಾಮತಿ ತಾಲ್ಲೂಕಿನ ರೈತರೊಂದಿಗೆ ಮಂಗಳವಾರ ಈ ಕುರಿತು ಸಭೆ ನಡೆಸಲಾಗಿದೆ.
ಸಂಸದರು ಮತ್ತು ಶಾಸಕರ ಭರವಸೆ ನೀಡಿದ್ದರಿಂದ ರೈತರು ಸರ್ವೇಗೆ ಸಮ್ಮತಿಸಿದ್ದರು. ಆದರೆ, ರೈಲ್ವೆ ಇಲಾಖೆ ಹಾಗೂ ಭೂ ಸ್ವಾಧೀನ ಅಧಿಕಾರಿಗಳು ಸೂಕ್ತ ಪರಿಹಾರ ನೀಡದಿದ್ದರೆ ವಂಶಪರAಪರೆಯಾಗಿ ಉಳುಮೆ ಮಾಡಿಕೊಂಡು ಬಂದ ಭೂಮಿಯನ್ನು  ಭೂ ಸ್ವಾಧೀನಕ್ಕೆ ಬಿಡುವುದಿಲ್ಲ. ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಶಾಸಕ ರೇಣುಕಾಚಾರ್ಯ ರೈತರ ಪರ ತಿಳಿಸಿದರು.
ಬೇಡಿಕೆಗಳೇನು?:
* ರೈತರಿಗೆ ಅದೇ ಗ್ರಾಮದಲ್ಲಿ ರೈಲ್ವೆ ಇಲಾಖೆಯಿಂದ ಪರಿಹಾರದ ರೂಪದಲ್ಲಿ ಜಮೀನು ಕೊಡಬೇಕು.
* ರೈತ ಕುಟುಂಬಕ್ಕೆ ಉದ್ಯೋಗ ನೀಡಬೇಕು
* ಪ್ರತಿ ಎಕರೆ ಅಡಕೆ ತೋಟಕ್ಕೆ ೨.೫೦ ಕೋಟಿ ರೂ. ಹಣ ಮಂಜೂರು ಮಾಡಬೇಕು

Leave a Reply

Your email address will not be published. Required fields are marked *

error: Content is protected !!