ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಅವಕಾಶ, ಹಾಗೆಂದರೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಏರ್ ಪೋರ್ಟ್’ನಲ್ಲಿ ರಾತ್ರಿ ಹೊತ್ತಲ್ಲೂ ವಿಮಾನಗಳು ಲ್ಯಾಂಡ್ ಆಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಹೆಲಿಪ್ಯಾಡ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಎರಡನೇ ಹಂತದ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಏನಿದು ನೈಟ್ ಲ್ಯಾಂಡಿಂಗ್: ವಿಮಾನ ನಿಲ್ದಾಣದ ರನ್ ವೇನಲ್ಲಿ ವಿಮಾನಗಳು ರಾತ್ರಿ ಹೊತ್ತಲ್ಲೂ ಯಾವುದೇ ಸಮಸ್ಯೆಗಳಿಲ್ಲದೇ ಇಳಿಯುವುದಕ್ಕೆ ರನ್ ವೇಯ ಎರಡೂ ಕಡೆ ಲೈಟ್ ಬಾರ್ ಅಳವಡಿಸಲಾಗಿರುತ್ತದೆ. ಅದರ ಮೂಲಕ ಕಾಕ್ ಪಿಟ್ ನಲ್ಲಿ ಕುಳಿತ ಪೈಲೆಟ್’ಗೆ ಸುಲಭವಾಗಿ ರಾತ್ರಿ ಹೊತ್ತಲ್ಲೂ ವಿಮಾನ ಲ್ಯಾಂಡ್ ಮಾಡಲು ಅನುಕೂಲವಾಗುತ್ತದೆ. ಈ ವ್ಯವಸ್ಥೆಯನ್ನು ಶಿವಮೊಗ್ಗದಲ್ಲೂ ಅಳವಡಿಸಲಾಗುತ್ತಿದೆ.

ವಿಡಿಯೋ ಸುದ್ದಿಗಾಗಿ ಕ್ಲಿಕ್ ಮಾಡಿ: https://youtu.be/vDLe2cs1VDA

Leave a Reply

Your email address will not be published. Required fields are marked *

error: Content is protected !!