ಎಸ್.ಎಸ್.ಎಲ್.ಸಿ ಓದುವವರಿಗೆ ಟ್ಯಾಬ್ಲಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಸ್.ಎಸ್.ಎಲ್.ಸಿ ಓದುವ ವಿದ್ಯಾರ್ಥಿಗಳಿಗೆ ರೋಟರಿ ಮತ್ತು ಪಬ್ಲಿಕ್ ಟಿವಿ ಸಹಯೋಗದಲ್ಲಿ ಟ್ಯಾಬ್ಲಟ್’ಗಳನ್ನು ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ 10ನೇ ತರಗತಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ `ಜ್ಞಾನದೀವಿಗೆ’ ಯೋಜನೆ ಜಾರಿಗೆ ತರಲಾಗಿದೆ. ಅದರಡಿ ವಿತರಣೆ ಮಾಡಲಾಗುವುದು. ಟ್ಯಾಬ್ಲಟ್’ನಲ್ಲಿ ಎನ್‌ಸಿಇಆರ್‌ಟಿ ಸಿಲೆಬಸ್ ತಂತ್ರಾAಶ ಕೂಡ ಅಳವಡಿಸಲಾಗುವುದು ಎಂದು ರೋಟರಿ ಕ್ಲಬ್‌ನ ಎಚ್.ಎಲ್. ರವಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನ.8ರ ಬೆಳಗ್ಗೆ 9ಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ ನೀಡುವರು. ಅಂದು ಸಾಂಕೇತಿಕವಾಗಿ 300 ಟ್ಯಾಬ್ಲಟ್ ವಿತರಿಸಲಾಗುತ್ತದೆ ಎಂದು ಹೇಳಿದರು.
* ದೇಣಿಗೆ ನೀಡಲು ಸಂಪರ್ಕಿಸಿ:
ಒಂದು ಟ್ಯಾಬ್ಲಟ್ ಖರೀದಿಗೆ 3,495 ರೂ. ತಗಲುತ್ತಿದೆ. ರಾಜ್ಯದಲ್ಲಿ ಅಂದಾಜು 25 ಲಕ್ಷ ಎಸ್.ಎಸ್.ಎಲ್.ಸಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ, 12.5 ಲಕ್ಷ ಟ್ಯಾಬ್ಲಟ್’ಗಳ ಅಗತ್ಯವಿದೆ. ಹಣವನ್ನು ರಾಜ್ಯದ ಎಲ್ಲ ರೋಟರಿ ಕ್ಲಬ್’ಗಳು ದೇಣಿಗೆ ಮೂಲಕ ಸಂಗ್ರಹಿಸಿ ಶಿಕ್ಷಣ ಇಲಾಖೆಯ ಉಸ್ತುವಾರಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಸಹಾಯ ಮಾಡಲು ಇಚ್ಛಿಸುವವರಿಗೆ ಆದಾಯ ತೆರಿಗೆ 80ಜಿಯ ವಿನಾಯಿತಿ ಸೌಲಭ್ಯ ಕೂಡ ಇದೆ. ದಾನಿಗಳು ಅಕೌಂಟ್ ನಂ.7052000100100237201, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ 0000705, ಕರ್ನಾಟಕ ಬ್ಯಾಂಕ್ ಮುಖ್ಯ ಶಾಖೆ, ಶಿವಮೊಗ್ಗ, ಮೊ.ಸಂ. 9448396400ಗೆ ಸಂಪರ್ಕಿಸಿ.
ರೋಟರಿ ಪ್ರಮುಖರಾದ ಎನ್.ಎಸ್.ಶ್ರೀಧರ್, ಸುದ್ದಿಗೋಷ್ಠಿಯಲ್ಲಿ ಎಚ್.ಎಸ್.ಮೋಹನ್, ಜಿ.ವಿಜಯಕುಮಾರ್, ಗಣೇಶ್, ಸೋಮಶೇಖರ್, ಅಶೋಕ್ ಶೇಟ್, ರಮೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!