ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ರೇಡಿಯೋ ಜಾಕಿ, ವಿಡಿಯೋಗ್ರಾಫರ್ ಕಮ್ ವಿಡಿಯೋ ಎಡಿಟರ್ ಆಗಲು ಆಸಕ್ತಿರುವವರಿಗೆ ಶಿವಮೊಗ್ಗದಲ್ಲಿಯೇ ಉದ್ಯೋಗ ಅವಕಾಶ ಲಭ್ಯವಿದೆ.
ಶೀಘ್ರವೇ ಆರಂಭವಾಗಲಿರುವ ‘ರೇಡಿಯೋ ಶಿವಮೊಗ್ಗ‘ ಎಫ್.ಎಂ. 90.8 MHz ಸಮುದಾಯ ಬಾನುಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆಸಕ್ತರು ಕೆಳಗಿನ ಅರ್ಹತೆಗಳನ್ನು ಹೊಂದಿದ್ದಲ್ಲಿ ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿಯಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಕ್ರಿಯಾಶೀಲವಾಗಿ ತಂಡದೊಂದಿಗೆ ಕೆಲಸ ನಿರ್ವಹಿಸುವ ಆಕಾಂಕ್ಷೆ ಇರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಬರಬೇಕು. ಇಂಗ್ಲಿಷ್ ಹಾಗೂ ಹಿಂದಿಯ ಜ್ಞಾನ ತಕ್ಕಮಟ್ಟಿಗೆ ಇದ್ದರೆ ಒಳಿತು. ಸಮಕಾಲೀನ ವಿದ್ಯಮಾನಗಳು, ಜಾನಪದ, ಶಿಕ್ಷಣ, ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ಅಗತ್ಯ.
ಆಸಕ್ತರು ತಮ್ಮ ಸ್ವವಿವರ ಹಾಗೂ ಪಾಸ್ ಫೋರ್ಟ್ ಸೈಜ್ ಫೋಟೋವನ್ನು radioshivamogga@gmail.com ಅಥವಾ (ಮೊ: 7259176279, 9916457481)ಗೆ ವಾಟ್ಸಪ್ ನಲ್ಲಿ ಕಳುಹಿಸಬಹುದು.
https://www.suddikanaja.com/2021/08/10/home-minister-aaraga-jnanendra-meeting-with-police-officials/