ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ಎಲ್ಲಿಯವರೆಗೂ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿ ಎರಡು ಕೋಮುಗಳ ಮಧ್ಯೆ ಉಂಟಾಗಿರುವ ಗಲಾಟೆಯನ್ನು ಮನಗಂಡು ಶಿವಮೊಗ್ಗ ನಗರದಲ್ಲಿ ಶಾಂತಿಕಾಪಾಡುವ ದೃಷ್ಟಿಯಿಂದ ಶನಿವಾರ ಬೆಳಗ್ಗೆ 10ರವರೆಗೆ 144 ಜಾರಿಗೆ ತರಲಾಗಿದೆ.
ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಅನ್ವಯವಾಗುವಂತೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಈ ವೇಳೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ಅಂಶಗಳ ಮೇಲೆ ನಿಷೇಧ ಹೇರಲಾಗಿದೆ. ಐದಕ್ಕಿಂತ ಅಧಿಕ ಜನನ ಸೇರುವಂತಿಲ್ಲ. ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಪ್ರತಿಕೃತಿ ದಹಿಸುವಂತಿಲ್ಲ. ಬಹಿರಂಗ ಘೋಷಣೆ, ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ.

ಗಾಂಧಿ ಬಜಾರ್ ಸ್ತಬ್ಧ, ಕಾರಣವೇನು, ಈಗ ಹೇಗಿದೆ ಪರಿಸ್ಥಿತಿ?

error: Content is protected !!