ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ಅತ್ಯಧಿಕ 190 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಲಾಕ್ ಡೌನ್ ಮಧ್ಯೆಯೂ ಭದ್ರಾವತಿಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ.
READ | ಲಾಕ್ಡೌನ್ ವಿಸ್ತರಣೆ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ
ಗುರುವಾರ 599 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 37 ವಿದ್ಯಾರ್ಥಿಗಳು, 5 ಸಿಬ್ಬಂದಿ ಇದ್ದಾರೆ. 514 ಜನ ಗುಣಮುಖರಾಗಿದ್ದಾರೆ. 7 ಜನ ಮೃತಪಟ್ಟಿದ್ದಾರೆ.
2,358 ಮಾದರಿಯನ್ನು ಪಡೆದಿದ್ದು, 2,782 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 618 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 368, ಕೋವಿಡ್ ಕೇರ್ ಸೆಂಟರ್ನಲ್ಲಿ 1,604, ಖಾಸಗಿ ಆಸ್ಪತ್ರೆಯಲ್ಲಿ 1,612, ಹೋಮ್ ಐಸೋಲೇಷನ್ ನಲ್ಲಿ 2,076, ಟ್ರಿಯೇಜ್ ನಲ್ಲಿ 668 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,946 ಇದೆ.
ತಾಲೂಕುವಾರು ವರದಿ | ಶಿವಮೊಗ್ಗ 135, ಭದ್ರಾವತಿ 190, ತೀರ್ಥಹಳ್ಳಿ 15, ಶಿಕಾರಿಪುರ 78, ಸಾಗರ 50, ಹೊಸನಗರ 61, ಸೊರಬ 54, ಬಾಹ್ಯ ಜಿಲ್ಲೆಯ 16 ಪ್ರಕರಣಗಳಿವೆ.
https://www.suddikanaja.com/2021/06/01/corona-case-raised-in-bhadravathi-and-shivamogga/