ಬೆಂಕಿಯ ಕಾವಲಿಯಾದ ಶಿವಮೊಗ್ಗ, ಕಾರಿನ ಗಾಜು ಪುಡಿ ಪುಡಿ, ವಾಹನಗಳು ಜಖಂ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳದ ಸಹ ಸಂಚಾಲಕ ನಾಗೇಶ್ ಮೇಲೆ ನಡೆದ ಹಲ್ಲೆ ಪ್ರಕರಣ ಹಿನ್ನೆಲೆ ಶಿವಮೊಗ್ಗ ನಗರ ಅಕ್ಷರಶಃ ಗುರುವಾರ ಬೆಂಕಿಯ ಕಾವಲಿಯಾಗಿದೆ.

Gandhi bazar riotಏಕಾಏಕಿ ಗಾಂಧಿ ಬಜಾರ್ ನಲ್ಲಿ ಗಲಾಟೆ ಆರಂಭಗೊಂಡು ಅದು ಲಷ್ಕರ್ ಮೊಹಲ್ಲಾ, ರವಿ ವರ್ಮ ಬೀದಿ ಸೇರಿ ಹಲವೆಡೆ ವ್ಯಾಪಿಸಿತು. ಗುಂಪೊಂದು ಕಲ್ಲು ತೂರಾಟ ಮಾಡಿದ ಪರಿಣಾಮ ಕಾರು, ದ್ವಿಚಕ್ರ ವಾಹನಗಳು ಜಖಂಗೊಂಡವು.
ಶಿವಮೊಗ್ಗಕ್ಕೆ ಐಜಿಪಿ ಭೇಟಿ: ಪೂರ್ವ ವಲಯದ ಐಜಿಪಿ ರವಿ ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಾರ್ವಜನಿರ‍್ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ವದಂತಿಗಳನ್ನು ನಂಬಬೇಡಿ ಎಂದು ತಿಳಿಸಿದರು.
ಆರೋಪಿಗಳ ಬಂಧನಕ್ಕೆ ತಂಡ ರಚನೆ: ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚುವುದಕ್ಕಾಗಿ ರೌಡಿ ನಿಗ್ರಹ ದಳದ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್, ಕೋಟೆ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಅವರನ್ನು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಘಟನೆಯ ಪೂರ್ಣ ವಿಡಿಯೋ ನ್ಯೂಸ್ ⇓

error: Content is protected !!