ಕೆಲಸ ನೀಡುವ ಮುನ್ನ ಹುಷಾರ್, ಅನ್ನ ಹಾಕಿದ ಮನೆಗೆ ಕನ್ನ, ಕಳ್ಳತನ ಮಾಡಲೆಂದೆ ಬಂದಿದ್ದ ಖದೀಮ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅನ್ನ ಹಾಕಿದವರಿಗೆ ಕನ್ನ ಹಾಕಿದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅಂಗಡಿಯಲ್ಲಿ ಕಳ್ಳತನ ಮಾಡಿರುವ ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ ಅಬ್ದುಲ್ ದಿಲಾವರ್ ಮಲ್ಲಿಕ್ (31) ಎಂಬಾತನನ್ನು ಬಂಧಿಸಲಾಗಿದೆ.

WhatsApp Image 2020 12 01 at 2.08.08 PMಪಶ್ಚಿಮ ಬಂಗಾಳದಿಂದ ಕಳವು ಮಾಡುವ ಉದ್ದೇಶದಿಂದಲೇ ಶಿವಮೊಗ್ಗಕ್ಕೆ ಬಂದಿದ್ದ ಅಬ್ದುಲ್, ಚಿನ್ನ, ಬೆಳ್ಳಿಯ ಅಂಗಡಿಯಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದ. ಅಂಗಡಿಯ ಮಾಲೀಕ ತಿರುಪಳಯ್ಯನಕೇರಿಯ ತಮ್ಮ ಮನೆಯಲ್ಲಿಯೇ ಈತನಿಗೆ ಆಶ್ರಯ ನೀಡಿದ್ದ. ಆದರೆ, ಅಂಗಡಿಯಿಂದಲೇ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ.
ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಹಿಂದೆ ಶಿವಮೊಗ್ಗದ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಇಲ್ಲ.
ತನಿಖಾ ತಂಡದಲ್ಲಿದ್ದವರು: ಡಿವೈಎಸ್.ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನ ಮತ್ತು ಕೋಟೆ ಠಾಣೆಯ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಪಿ.ಎಸ್.ಐ ಶಿವಾನಂದ್ ಕೋಳಿ, ಸಿಬ್ಬಂದಿ ಅಶೋಕ್, ಕಲ್ಲನಗೌಡ, ಅಂಡ್ರೋನ್ ಜೋನ್ಸ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
72 ಗ್ರಾಂ ಚಿನ್ನ ವಶ: ಆರೋಪಿ ಅಬ್ದುಲ್ ದಿಲಾವರ್ ಮಲ್ಲಿಕ್ ಅಲಿಯಾಸ್ ಹುಸೇನ್ ಎಂಬಾತನಿAದ 3.47 ಲಕ್ಷ ರೂ. ಮೌಲ್ಯದ 72 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!