
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಾಗರಹಾವೊಂದು 9 ಕೋಳಿಮರಿಗಳನ್ನು ನುಂಗಿದೆ.
ಕೋಳಿ ಫಾರಂನಲ್ಲಿ ಸದ್ದು ಕೇಳಿ ಜಾನುವಾರು ಸಂಕೀರ್ಣದ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿದ್ದಾರೆ. ಆಗ ಕೋಳಿ ಫಾರಂ ಜಾಗದಲ್ಲಿ ಹಾವು ಬುಸುಗುಡುತ್ತಿತ್ತು. ನಾಗರಹಾವು 20ಕ್ಕೂ ಹೆಚ್ಚು ಕೋಳಿ ಮರಿಗಳನ್ನು ಸಾಯಿಸಿದ್ದು, 9 ಮರಿಗಳನ್ನು ನುಂಗಿದೆ.
ನಾಗರಹಾವನ್ನು ಹಿಡಿದು ರಕ್ಷಣೆ
ನಾಗರಹಾವನ್ನು ಕಂಡಿದ್ದೇ ಸ್ನೇಕ್ ಕಿರಣ್’ಗೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ದೌಡಾಯಿಸಿ ಹಾವನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ. ಹಾವು ಒಂದೊಂದಾಗಿ ಹಾವುಗಳನ್ನು ಹೊರಹಾಕಿದೆ. ಬಳಿಕ ಹಾವನ್ನು ಅರಣ್ಯಕ್ಕೆ ಬಿಡಲಾಗಿದೆ.
Police meeting | ಅಡಿಕೆ ವರ್ತಕರೊಂದಿಗೆ ಪೊಲೀಸರ ಮಹತ್ವದ ಸಭೆ, ಪ್ರಮುಖ 6 ಸೂಚನೆಗಳು