ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಸುಕಿನ ಜೋಳ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಸೈಯದ್ ಅಜೀಜ್ ಅವರು ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ । ಲವ್ ಮ್ಯಾರೇಜ್ ಆದ ಮೂರೇ ತಿಂಗಳಲ್ಲಿ ಆತ್ಮಹತ್ಯೆ
ಹೊಸನಗರ ತಾಲೂಕಿನ ನವಟೂರು ಗ್ರಾಮ ನಿವಾಸಿ ಮಂಜುನಾಥ ಆಚಾರಿ ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದ ಎರಡನೇ ಆರೋಪಿ ದರ್ಶನ್ ಆಚಾರಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಎನು ಪ್ರಕರಣ | ತಮ್ಮ ಜಮೀನಿನಲ್ಲಿ ಅಡಕೆ ಗಿಡಗಳ ನಡುವೆ ಆರೋಪಿ 1.30 ಲಕ್ಷ ರೂಪಾಯಿ ಮೌಲ್ಯದ 167 ಗಾಂಜಾ (6-7 ಅಡಿ) ಗಿಡಗಳನ್ನು ಬೆಳೆಸಿದ್ದರು. ಅವುಗಳನ್ನು ದಸ್ತಗಿರಿ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ । ವಿದ್ಯುತ್ ಬಿಲ್, ಪವರ್ ಕಟ್ ಇತ್ಯಾದಿ ಮಾಹಿತಿ ಬೇಕೆ, ಹಾಗಾದರೆ ಎಲ್ಲದಕ್ಕೂ ಉತ್ತರ ನೀಡಲಿದೆ ‘ನನ್ನ ಮೆಸ್ಕಾಂ’!