ಚಿಕ್ಕ ಮಗುವನ್ನು ಹೊಡೆದ ಕಾರಣಕ್ಕೆ ಹೆತ್ತ ಕರುಳನ್ನೇ ಕೊಂದ ತಾಯಿ!

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ತಾಯಿಯೇ ತನ್ನ ಸ್ವಂತ ಮಗುವನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ಸಂಭವಿಸಿದೆ.
ಪಟ್ಟಣಗೆರೆ ನಿವಾಸಿ ತೇಜ್ ರಾಮ್, ದೇವಿ ಎಂಬ ದಂಪತಿಯ ಪುತ್ರ ಮನೀಷ್(6) ಕೊಲೆಯಾದಾತ. ಪ್ರಕರಣ ಸಂಬಂಧ ದೇವಿ(26)ಯನ್ನು ಬಂಧಿಸಲಾಗಿದೆ.
ಕಾರಣವೇನು?: ಎರಡು ತಿಂಗಳ ಮಗುವಿಗೆ ಸದಾ ಹೊಡೆಯುತ್ತಿದ್ದನೆಂಬ ಕಾರಣದಿಂದ ಮನೀಷ್ ಮೇಲೆ ಸಿಟ್ಟುಗೊಂಡ ತಾಯಿ ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಘಟನೆಯ ಬಳಿಕ ತನ್ನ ಪತಿಗೆ ಮಗನ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ಹೇಳಿ ಮನೆಗೆ ಕರೆಸಿದ್ದಾಳೆ. ಪತಿ ಮನೆಗೆ ಬಂದ ಮೇಲೆ ಎಲ್ಲ ವಿಚಾರವನ್ನು ವಿವರಿಸಿದ್ದಾಳೆ.

ಜನ್ ಧನ್ ಯೋಜನೆಯ ಹೆಸರಲ್ಲಿ ಮಹಿಳೆಗೆ ಪಂಗನಾಮ

ಮನೀಷ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಎಷ್ಟೇ ತಿಳಿ ಹೇಳಿದರೂ ಮಾತೇ ಕೇಳುತ್ತಿರಲಿಲ್ಲ. ಹೀಗಾಗಿ, ಆತನಿಗೆ ಹೊಡೆದು, ದಿಂಬಿನಿಂದ ಮುಖ ಉಸಿರುಗಟ್ಟಿಸಿದ್ದಾರೆ. ಬಳಿಕ ಬಟ್ಟೆಯಿಂದ ಕತ್ತು ಹಿಸುಕಿದ್ದಾರೆ. ಮನೀಷ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಮೂಲತಃ ರಾಜಸ್ಥಾನದ ಜೋದ್ ಪುರದವರಾದ ತೇಜ್ ರಾಮ್ ಎಂಟು ವರ್ಷಗಳಿಂದ ಪಟ್ಟಣಗೆರೆಯಲ್ಲಿ ವಾಸವಾಗಿದ್ದರು. ಇವರಿಗೆ ವಿವಾಹವಾಗಿ ಆರು ವರ್ಷಗಳಾಗಿದ್ದು, ದಂಪತಿಗೆ ಮನೀಷ್(6) ಮತ್ತು 2 ತಿಂಗಳ ಗಂಡು ಮಗುವಿದೆ ಎಂದು ತಿಳಿದುಬಂದಿದೆ.
ಮಗುವನ್ನೇ ಕೊಂದಿರುವ ದೇವಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳೆಂದು ತಿಳಿದುಬಂದಿದೆ. ಪತಿ ನೀಡಿದ ದೂರಿನನ್ವಯ ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!