ಕಾಯ್ದೆ ವಿರೋಧಿಸುವವರು ನಿಜವಾದ ರೈತರಲ್ಲ, ಮುಖವಾಡ ಹೊತ್ತವರು, ಸಂಸದರ ಆರೋಪಗಳೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೈತರ ಉದ್ಧಾರಕ್ಕಾಗಿ ಜಾರಿಗೆ ತರಲಾಗಿರುವ ಕಾಯ್ದೆಯನ್ನು ವಿರೋಧಿಸುವವರು ನಿಜವಾದ ರೈತರಲ್ಲ. ಮುಖವಾಡವನ್ನು ಹೊತ್ತವರು ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಪರ ಕಾಯ್ದೆಗಳನ್ನು ವಿರೋಧದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಟೀಕಿಸಿದರು.

ಸಂಸದರ ಸಮರ್ಥನೆಗಳೇನು?

  • ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳಿಂದ ರೈತರಿಗೆ ಅನುಕೂಲವೇ ವಿನಹ ಅನಾನುಕೂಲವಿಲ್ಲ.
  • ವಾಮಪಂಥ, ಕಮ್ಯೂನಿಸ್ಟ್, ಪ್ರಗತಿಪರರು ಮತ್ತು ಎಡಪಂಥಿಯರು ಇದನ್ನು ಒಪ್ಪುತ್ತಿಲ್ಲ. ಕಾರಣ, ಇವರಿಗೆ ಕೃಷಿ ಕ್ಷೇತ್ರದ ಅಭಿವೃದ್ಧಿ ಹಿಡಿಸುವುದಿಲ್ಲ.
  • ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
  • ಕೇಂದ್ರ ಸರ್ಕಾರದ ಕಾಯ್ದೆಯಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ಹೀಗಿದ್ದರೂ ವಿರೋಧಿಸಲಾಗುತ್ತಿದೆ.
  • ಎಪಿಎಂಸಿ ಕಾಯ್ದೆಯಿಂದಾಗಿ ಕೃಷಿಕರು ದೇಶಾದ್ಯಂತ ಎಲ್ಲಾದರೂ ವ್ಯವಹಾರ ಮಾಡಬಹುದು. ಉತ್ಪನ್ನಗಳನ್ನು ಮಾರಾಟ ಮಾಡಬಹುದು.
  • ಕಿಸಾನ್ ಕಾರ್ಡ್, ಫಸಲ್ ಭೀಮಾ, ಹನಿ ನೀರಾವರಿ, ಕಿಸಾನ್ ಸಮ್ಮಾನ್ ಮುಂತಾದ ಯೋಜನೆಗಳ ಮೂಲಕ ರೈತರ ಬಾಳನ್ನು ಬೆಳಗಿಸುತ್ತಿದೆ.
  • ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಿಂದಾಗಿ ರೈತರ ಆದಾಯದಲ್ಲಿ ಏರಿಕೆ ಕಂಡಿದೆ. 2014ರಲ್ಲಿ 250 ಮಿಲಿಯನ್ ಟನ್ ಉತ್ಪಾದನೆನಷ್ಟಿದ್ದ
  • ಉತ್ಪಾದನೆ, 2020ರಲ್ಲಿ 291 ಮಿಲಿಯನ್ ಟನ್ ಆಗಿದೆ. ಶೇ.30ರಷ್ಟು ಆದಾಯ ಏರಿಕೆಯಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ಎಸ್.ಜ್ಯೋತಿಪ್ರಕಾಶ್, ಡಿ.ಎಸ್.ಅರುಣ್, ಸಾಲೇಕೊಪ್ಪ ರಾಮಚಂದ್ರ, ಕೃಷ್ಣೋಜಿರಾವ್, ಗಿರೀಶ್ ಪಟೇಲ್, ಶಿವರಾಜ್, ಪ್ರಸನ್ನ, ಸತೀಶ್, ಸುನೀತಾ ಅಣ್ಣಪ್ಪ ರಾಮು, ಗಂಗಾಧರ್ ಉಪಸ್ಥಿತರಿದ್ದರು.

error: Content is protected !!