ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‍ಮೆಂಟ್ ಸಮೀಪ ಖಾಲಿ ಇರುವ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಮಹಾನಗರ ಪಾಲಿಕೆಯು 3 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ಹಿಂದೇಟು ಹಾಕಿದ್ದಕ್ಕೆ ಪಾಲಿಕೆ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ರೂಪಾಂತರ ಕೊರೊನಾ, ಅವರ ಟ್ರಾವೆಲ್ ಹಿಸ್ಟರಿ ಇಲ್ಲಿದೆ
ದಂಡವೇಕೆ?: ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡದ ತ್ಯಾಜ್ಯವನ್ನು ಸುರಿದು ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ಪಾಲಿಕೆಯು ದಂಡ ವಿಧಿಸಿತ್ತು.
ಮಂಜುನಾಥ್ ಎಂಬುವವರು ತಮ್ಮ ಟ್ರಾಕ್ಟರ್‍ನಲ್ಲಿ ಹಳೆ ಕಟ್ಟಡದ ಕಲ್ಲು, ಮರಳು ತಂದು ಹಾಕುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಲಿಖಿತ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಿಷೇಧ ಉಪ ನಿಯಮಗಳು 2019-20ರ ಪ್ರಕಾರ ಜುಲ್ಮಾನೆಗಳ ಪಟ್ಟಿಯ ಕಲಂ ನಂಬರ್ 12ರಂತೆ ಮೂರು ಸಾವಿರ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ನಿರಾಕರಿಸಿದ್ದಲ್ಲದೇ ಮತ್ತೆ ಕಸ ಹಾಕುವುದಾಗಿಯೂ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ನಗರಿಗರಿಗೆ ಪಾಲಿಕೆ ಶಾಕ್
ಎಲ್ಲಿ: ವಾರ್ಡ್ ನಂಬರ್ 1ರ ಸೋಮಿನಕೊಪ್ಪ ರಸ್ತೆಯ ವಿನೋಬ ನಗರ ರೈಲ್ವೆ ಗೇಟ್ ಸಮೀಪದ ಮೈತ್ರಿ ಅಪಾರ್ಟ್‍ಮೆಂಟ್ ಪಕ್ಕದಲ್ಲಿರುವ ಖಾಲಿ ಜಾಗ.