ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುಪುರದಲ್ಲಿ ಇದ್ದಕ್ಕಿದ್ದಂತೆ ಮನೆಯ ಸಮೀಪ ನಿಲ್ಲಿಸಿದ್ದ ಬಸ್ ಧಗ ಧಗನೆ ಉರಿದು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಆದರೆ, ಬಸ್ಗೆ ಬೆಂಕಿ ತಗಲಲು ಕಾರಣವೇನೆಂದು ತಿಳಿದುಬಂದಿಲ್ಲ.
ರವಿಕುಮಾರ್ ಎಂಬಾತ ಮನೆಯ ಸಮೀಪ ತನಗೆ ಸೇರಿದ್ದ ಬಸ್ ನಿಲ್ಲಿಸಿದ್ದ. ಒಳಗಡೆ ಡೀಸೆಲ್ ಮತ್ತು ಬ್ಯಾಟರಿ ಇಲ್ಲದಿದ್ದರೂ ಅನುಮಾನಾಸ್ಪದವಾಗಿ ಬಸ್ ಹೊತ್ತಿ ಉರಿದಿದೆ. ಕೆಲವೇ ಹೊತ್ತಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಬಸ್ ಅನ್ನು ಕೊರೊನಾದಿಂದಾಗಿ ಕೆಲವು ದಿನಗಳಿಂದ ಓಡಿಸುತ್ತಿರಲಿಲ್ಲ. ವಾಹನದ ಚಾವಣಿ, ಕಿಟಕಿ, ಗಾಜು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ: ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಬೆಂಕಿ ನೊಂದಿಸಿದ್ದಾರೆ. ಇದರಿಂದಾಗಿ, ಬಸ್ನ ಟೈಯರ್ಗಳಿಗೆ ಹಾನಿಯಾಗಿಲ್ಲ.
ಸುದ್ದಿ ಕಣಜ.ಕಾಂ | KARNATAKA | POLITICAL NEWS ಶಿವಮೊಗ್ಗ: ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಜನವರಿ 4ರಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದು ರಾಜ್ಯ ಒಬಿಸಿ […]
ಸುದ್ದಿ ಕಣಜ.ಕಾಂ | DISTRICT | HEALTH NEWS ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ (covid vaccine) ಮೇಳವನ್ನು ಜೂನ್ 8ರಂದು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಲಸಿಕಾಧಿಕಾರಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಚುನಾವಣೆ ಆಯೋಗ(Election commission)ವು ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದೆ. ಜಾಗೃತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿತ್ತು. ಸಖಿ ಮತಕೇಂದ್ರ, ಯುವಕರು, ಎಥ್ನಿಕ್, ವಿಶೇಷಚೇತನರಿಗೋಸ್ಕರ ಪ್ರತ್ಯೇಕ ಮತಗಟ್ಟೆಗಳ […]