ಕೋವಿಡ್ ರೂಲ್ಸ್ ಮಧ್ಯೆ ಜಿಲ್ಲಾಮಟ್ಟದ ಯುವಜನೋತ್ಸವ, ಯಾವ್ಯಾವ ಸ್ಪರ್ಧೆ ನಡೆಯಲಿವೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊವೀಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಯುವಜನೋತ್ಸವ ಸಂಘಟಿಸಬೇಕು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಬೇಕೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.

ಯುವಜನೋತ್ಸವದ ಯಶಸ್ವಿ ಅನುಷ್ಠಾನಕ್ಕೆ ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳಲಾಗುವುದು.ಸ್ಪರ್ಧಾಳುಗಳು ನಿಗದಿಪಡಿಸಿದ ದಿನದಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಗಮಿಸಿ ಕಾರ್ಯಕ್ರಮ ಆಯೋಜಕರಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಲಘು ಉಪಹಾರ ಹಾಗೂ ಅನ್ಯ ತಾಲೂಕಿನಿಂದ ಬರುವ ಸ್ಪರ್ಧಿಗಳಿಗೆ ವಾಸ್ತವ್ಯ ಪ್ರಯಾಣ ವೆಚ್ಚ ನೀಡಲಾಗುವುದು.
– ಮಂಜುನಾಥ್, ಜಿಲ್ಲಾ ಯುವಜನ ಕ್ರೀಡಾಧಿಕಾರಿ

error: Content is protected !!