ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ತಾಲೂಕಿನಲ್ಲಿ ಬುಧವಾರ 9 ಜನರಿಗೆ ಕೊರೊನಾ ಸೋಂಕು ತಗಲಿದೆ. ಇನ್ನುಳಿದಂತೆ, ಭದ್ರಾವತಿಯಲ್ಲಿ 1, ಸಾಗರ 4 ಹಾಗೂ ಬೇರೆ ಜಿಲ್ಲೆಯ 2 ಪ್ರಕರಣಗಳು ಪತ್ತೆಯಾಗಿವೆ.
ನಾಳೆಯಿಂದ ನೈಟ್ ಕರ್ಫ್ಯೂ, ಏನೆಲ್ಲ ನಿಯಮ ಅನ್ವಯ? ರಾತ್ರಿ ಸಂಚಾರಕ್ಕೆ ಖಡಕ್ ರೂಲ್ಸ್
ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಪ್ರಕರಣಗಳು ದೃಢಪಟ್ಟಿವೆ. 10 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು ಕೂಡ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ ಕೊರೊನಾರ ಜಿಲ್ಲೆಯಲ್ಲಿ 348 ಜನರ ಪ್ರಾಣ ಹರಣ ಮಾಡಿದೆ.
ಶಿವಮೊಗ್ಗಕ್ಕೂ ರೂಪಾಂತರದ ಕೊರೊನಾ ಕಾಟ, ಲಂಡನ್ ನಿಂದ ಎಷ್ಟು ಜನ ಬಂದಿದ್ದಾರೆ ಗೊತ್ತಾ?
102 ಸಕ್ರಿಯ ಪ್ರಕರಣ: ನಗರದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 30 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಪ್ರಸಕ್ತ 9 ಜನ ದಾಖಲಾಗಿದ್ದಾರೆ. ಮನೆ ಆರೈಕೆಯಲ್ಲಿ 63 ಜನರಿದ್ದಾರೆ. ಒಟ್ಟು 102 ಸಕ್ರಿಯ ಪ್ರಕರಣಗಳು ಇವೆ.