ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯಿತಿ, ತೀರ್ಥಹಳ್ಳಿಯ 38 ಮತ್ತು ಭದ್ರಾವತಿಯ 35 ಪಂಚಾಯಿತಿಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ, ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕು ವ್ಯಾಪ್ತಿಯ ಮಸ್ಟರಿಂಗ್ ಅನ್ನು ನಗರದ ಎನ್.ಇ.ಎಸ್.ನಲ್ಲಿ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಇಲ್ಲಿ ಚುನಾವಣೆ ವಾತಾವರಣ ಮನೆ ಮಾಡಿತ್ತು. ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರು.
ಮತದಾರರ ಪಟ್ಟಿಯಲ್ಲಿ ಮತದಾರರ ಚಿತ್ರ ಸರಿಯಾಗಿ ಕಾಣದಿರುವುದು, ಗ್ರಾಪಂ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಕೆಲವರು ವಿಳಂಬವಾಗಿ ಬಂದಿದ್ದು, ಹೀಗೆ ಕೆಲವು ಗೊಂದಲಗಳ ನಡುವೆಯೇ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. 50 ರೂಟ್ಗೆ 47 ಬಸ್, 7 ಜೀಪ್: ಶಿವಮೊಗ್ಗ ತಾಲೂಕಿಗೆ 50 ಮಾರ್ಗಗಳನ್ನು ಗುರುತಿಸಲಾಗಿದೆ. ಅದರಲ್ಲಿ 43 ಬಸ್ ಮಾರ್ಗಗಳಿದ್ದು, 47 ಬಸ್ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, 8 ಮಾರ್ಗಗಳಿಗೆ 7 ಜೀಪ್ ನೀಡಲಾಗಿದೆ. ಅಧಿಕಾರಿಗಳ ಓಡಾಟಕ್ಕೆ ಜೀಪ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ನಲ್ಲಿ ಸಿಬ್ಬಂದಿ ಮತ್ತು ಬ್ಯಾಲೆಟ್ ಪೇಪರ್, ಬಾಕ್ಸ್ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ.
ಬಿಗಿ ಭದ್ರತೆ: ಮಾಸ್ಟರಿಂಗ್ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ, ಇಡೀ ರಾತ್ರಿ ಪಂಚಾಯಿತಿಯಲ್ಲೇ ಚುನಾವಣೆ ಸಿಬ್ಬಂದಿ ಇರಬೇಕಾಗಿರುವುದರಿಂದ ಅಲ್ಲಿ ಹೋಂ ಗಾಡ್ರ್ಸ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಸುದ್ದಿ ಕಣಜ.ಕಾಂ | CITY | SHIVARATRI ಶಿವಮೊಗ್ಗ: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತವು ಕಫ್ರ್ಯೂ ವಿಧಿಸಿರುವುದರಿಂದ ಶಿವರಾತ್ರಿಯಂದು (ಮಾರ್ಚ್ 1) ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಾರ್ವಜನಿಕರ […]
ಸುದ್ದಿ ಕಣಜ.ಕಾಂ ಸಾಗರ SAGAR: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿರುವ ಪೂರ್ವ ವಲಯ ಮಹಾನಿರೀಕ್ಷಕ (ಐಜಿಪಿ) ತ್ಯಾಗರಾಜನ್ ಸಾಗರದಲ್ಲಿ ಸಂಚಾರ ಪೊಲೀಸ್ ಠಾಣೆ (sagar traffic police station) ಆರಂಭದ ಬಗ್ಗೆ ಮಹತ್ವದ […]
HIGHLIGHTS ಅಂಚೆ ಚೀಟಿ ಸಂಗ್ರಹಣೆಯನ್ನು ಉತ್ತೇಜಿಸಲು ‘ದೀನ್ ದಯಾಳ್ ಸ್ಪರ್ಶ್’ ಯೋಜನೆಯಡಿ ವಿದ್ಯಾರ್ಥಿ ವೇತನ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿ ವೇತನದ ಉದ್ದೇಶ ವಿದ್ಯಾರ್ಥಿಗಳಲ್ಲಿನ ವಿಶ್ರಾಂತಿ ಮತ್ತು […]