ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಈಗ ಸನ್ನಿಹಿಸಿದೆ. ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್‍ಕೋಸ್)ನಿಂದ ಆರೋಗ್ಯ ವಿಮೆ ಯೋಜನೆ ಆರಂಭಿಸಲಾಗುತ್ತಿದ್ದು, ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ.
ಗ್ರಾಪಂ ಚುನಾವಣೆ, ಹೇಗಿತ್ತು ಮಸ್ಟರಿಂಗ್, ಕಲ್ಪಿಸಿದ್ದ ಸೌಲಭ್ಯಗಳೇನು? ಆದ ಗೊಂದಲಗಳೇನು?
ಆನ್‍ಲೈನ್ ಮೂಲಕ ಸಂಘದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಈ ವಿಚಾರವನ್ನು ಪ್ರಕಟಿಸಿದರು.
- 18 ರಿಂದ 80 ವರ್ಷದೊಳಗಿನ ಸದಸ್ಯರು ಇದರ ಪ್ರಯೋಜನ ಪ್ರಾಪ್ತವಾಗಲಿದೆ.
- ಸದಸ್ಯರ ಪತಿ, ಪತ್ನಿ ಆರೋಗ್ಯ ವಿಮೆಯ ಪ್ರಯೋಜನ ಪಡೆಯಬಹುದು.
- ವಿಮೆ ಮೊತ್ತ 4,100 ರೂಪಾಯಿ ಇದೆ. 4 ಲಕ್ಷ ರೂಪಾಯಿವರೆಗೆ ಆಸ್ಪತ್ರೆ ವೆಚ್ಚ ಪಡೆಯಬಹುದು.
- ಅಡಿಕೆ ನೇರ ಖರೀದಿ ವಲಯವನ್ನು ಹಂತ ಹಂತವಾಗಿ ಸಂಘದ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗುವುದು.
ವಿಷನ್-2020 ಅಡಿಯಲ್ಲಿ ಮಾರ್ಚ್ ಅಂತ್ಯದವರೆಗೆ ಇ ಟೆಂಡರ್ ಮೂಲಕ 41,729 ಕ್ವಿಂಟಾಲ್ ಮತ್ತು ನೇರ ಖರೀದಿ ಮೂಲಕ 420.122 ಕ್ವಿಂಟಾಲ್ ಅಡಿಕೆ ಖರೀದಿಸಲಾಗಿದೆ. ಈ ಅವಧಿಯಲ್ಲಿ 58,986.118 ಕ್ವಿಂಟಾಲ್ ಮಾರಾಟ ಮಾಡಲಾಗಿದೆ ಎಂದು ಹೇಳಿದರು.
ಅಡಿಕೆ ವಹಿವಾಟು ನಡೆಸಿರುವ ಸಂಘ, ಸದಸ್ಯರಿಗೆ ಹಣಕಾಸಿನ ತೊಂದರೆ ಆಗದಂತೆ ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಅವರ ಖಾತಗೆ ಹಣ ಜಮೆ ಮಾಡಲಾಗಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು.