ಹೊಸ ವರ್ಷದಲ್ಲಿ ಮದ್ಯಪ್ರಿಯರಿಗೆ ನಿರಾಸೆ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ರೂಪಾಂತರ ಕೊರೊನಾ ವೈರಸ್ ಮದ್ಯಪ್ರಿಯರ ಖುಷಿಯನ್ನೂ ಕಸಿದಿದೆ. ಸೋಂಕು ತಡೆಯುವ ಉದ್ದೇಶದಿಂದ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಳೆದ ವರ್ಷದ ಹೋಲಿಕೆಯಲ್ಲಿ ಈ ಸಲ ಭಾರಿ ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ.
ಅಬಕಾರಿ ಇಲಾಖೆಗೆ ಏಳು ದಿನಗಳಲ್ಲಿ 519.22 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷ ಡಿಸೆಂಬರ್ 24 ರಿಂದ 31ರ ವರೆಗೆ ಒಟ್ಟು 878.25 ಕೋಟಿ ರೂಪಾಯಿ ಮೌಲ್ಯದ ಐಎಂಎಲ್ ಹಾಗೂ ಬಿಯರ್ ಖರೀದಿಯಾಗಿತ್ತು. ಇದರಿಂದ ರಾಜ್ಯ ಅಬಕಾರಿ ಇಲಾಖೆಗೆ ಅಂದಾಜು 500 ಕೋಟಿ ಆದಾಯ ಬಂದಿತ್ತು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ನಡೆಯಲಿದೆ ಕಮಲ ಪಾಳಯದ ಮಹತ್ವದ ಸಭೆ

ಈ ವರ್ಷ ಕೇವಲ 844.59 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. 2019ರ ಹೋಲಿಕೆಯಲ್ಲಿ 33.66 ಕೋಟಿ ರೂಪಾಯಿಯಷ್ಟು ಕಡಿಮೆ ಮದ್ಯ ಮಾರಾಟವಾಗಿದೆ.
ಹಾಟ್ ಡ್ರಿಂಕ್ಸ್ ಮೇಲೂ ಕೊರೊನಾ ಏಟು: ಪ್ರಸಕ್ತ ವರ್ಷದಲ್ಲಿ ಹಾಟ್ ಡಿಂಕ್ಸ್ ಮತ್ತು ಬಿಯರ್ ಹೆಚ್ಚಾಗಿ ಖರೀದಿಸಿಲ್ಲ. ಕಳೆದ ವರ್ಷದ ಹೋಲಿಕೆಯಲ್ಲಿ ಕೇವಲ 19.21 ಕೋಟಿ ರೂ. ಮಾತ್ರ ಹೆಚ್ಚಳವಾಗಿದೆ. ಹೊಸ ವರ್ಷದ ಮುಂಚಿನ 7 ದಿನಗಳಲ್ಲಿ ಕನಿಷ್ಠ 50 ರಿಂದ 100 ಕೋಟಿ ರೂ. ಸಂಗ್ರಹಿಸುತ್ತಿದ್ದ ಅಬಕಾರಿ ಇಲಾಖೆ ಆದಾಯಕ್ಕೂ ಏಟು ಬಿದ್ದಿದೆ.

error: Content is protected !!