Launch | ಹಸಿರುಮಕ್ಕಿ ಲಾಂಚ್ ಸ್ಥಗಿತ, ಜನರಿಗೆ 40 ಕಿಮೀ ಹೆಚ್ಚುವರಿ ಪ್ರಯಾಣದ ಶಾಕ್

sharavathi launch

 

 

ಸುದ್ದಿ ಕಣಜ.ಕಾಂ ಸಾಗರ
SAGARA: ಮಲೆನಾಡಿನಲ್ಲಿ ಮಳೆ ಕೈಕೊಟ್ಟ ಕಾರಣದಿಂದ ಶರಾವತಿ ಜಲಾಶಯದಲ್ಲಿ ನೀರಿನ‌ ಪ್ರಮಾಣ ಇಳಿಕೆಯಾಗಿದೆ. ಇದು ಲಾಂಚ್ ಸೇವೆ ಮೇಲೆ ಪರಿಣಾಮ ಬೀರಿದ್ದು, ಗುರುವಾರದಿಂದ ಹಸಿರುಮಕ್ಕಿ ನದಿಯಲ್ಲಿನ ಲಾಂಚ್ ಸೇವೆ ಸ್ಥಗಿತಗೊಂಡಿದೆ.

READ | ಶೈಕ್ಷಣಿಕವಾಗಿ ಹೊಸ ದಾಖಲೆ ಸೃಷ್ಟಿಸಿದ ಶಿವಮೊಗ್ಗ, ಎಸ್.ಎಸ್.ಎಲ್.ಸಿನಲ್ಲಿ ಯಾವ ತಾಲೂಕು ಎಷ್ಟನೇ ಸ್ಥಾನದಲ್ಲಿದೆ?

40 ಕಿಮೀ ಹೆಚ್ಚುವರಿ ಪ್ರಯಾಣ
ನಿಟ್ಟೂರು, ಹೊಸಕೊಪ್ಪ, ಸಂಪೆಕಟ್ಟೆ, ನಾಗೋಡಿ, ಕಟ್ಟಿನಹೊಳೆ ಮುಂತಾದ ಊರುಗಳಿಂದ ಸಾಗರ ಪೇಟೆಗೆ ಬರಲು ಹೆಚ್ಚುವರಿ‌ 40 ಕಿಮೀ ಕ್ರಮಿಸುವ ಅನಿವಾರ್ಯತೆ ಇದೆ.
ಶರಾವತಿ ಹಿನ್ನೀರು ಭಾರಿ ಇಳಿಕೆ
ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿ ಕಡಿಮೆಯಾಗುತ್ತಿದ್ದ ನೀರು ಈ ವರ್ಷ ಒಂದು ತಿಂಗಳ ಮುಂಚೆಯೇ ಇಳಿಕೆಯಾಗಿವೆ. ಲಾಂಚ್ ಸಂಚಾರಕ್ಕೆ ಅಗತ್ಯವಿರುವಷ್ಟು ನೀರು ಇಲ್ಲದ್ದರಿಂದ ಸೇವೆ ಸ್ಥಗಿತಗೊಳಿಸಲಾಗಿದೆ. ಮಳೆಗಾಲ ಆರಂಭಗೊಂಡು ನೀರು ಸಂಗ್ರಹವಾದ ಬಳಿಕವೇ ಲಾಂಚ್ ಸೇವೆ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!