Graduate Constituency | ಡಾ.ಧನಂಜಯ ಸರ್ಜಿಗೆ ಬಿಜೆಪಿ ಟಿಕೆಟ್, ಇವರ ಬಗ್ಗೆ ನಿಮಗೆಷ್ಟು ಗೊತ್ತು?

Dr Dhananjay sarji

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ(Dr Dhananjay sarji) ಅವರಿಗೆ ಬಿಜೆಪಿ ಟಿಕೆಟ್ ಅಂತಿಮವಾಗಿದೆ.
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಇವರು ಕಣ ಪ್ರವೇಶಿಸಿರುವುದರಿಂದ ಕಣ ಮತ್ತಷ್ಟು ರಂಗೇರಿದೆ.

READ | ಹಸಿರುಮಕ್ಕಿ ಲಾಂಚ್ ಸ್ಥಗಿತ, ಜನರಿಗೆ 40 ಕಿಮೀ ಹೆಚ್ಚುವರಿ ಪ್ರಯಾಣದ ಶಾಕ್

ಕುತೂಹಲಕ್ಕೆ ತೆರೆ
ಬಿಜೆಪಿಯಿಂದ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಹಲವರ ಹೆಸರುಗಳು ಕೇಳಿಬರುತ್ತಿದ್ದವು. ಡಾ.ಧನಂಜಯ ಸರ್ಜಿ ಅವರ ಹೆಸರೂ ಮುನ್ನೆಲೆಗೆ ಬಂದಿತ್ತು. ಕೇಂದ್ರೀಯ ಚುನಾವಣೆ ಸಮಿತಿ ಅಂತಿಮವಾಗಿ ಹೆಸರು ಪ್ರಕಟಿಸುವ ಮೂಲಕ ಕುತೂಹಲ ತಣಿಸಿದೆ.
ಜೂನ್ 3ರಂದು ಪದವೀಧರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ್ದು, ಕದನ ಕಣ ರಂಗೇರಲಿದೆ.
ನೈರುತ್ಯ ಪದವೀಧರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಕಟ್ಟಾಳು ಎಸ್.ಪಿ.ದಿನೇಶ್ ಅವರಿಗೆ ಪಕ್ಷದಿಂದ ಟಿಕೆಟ್ ನೀಡದೇ ಇರುವುದರಿಂದ ಅವರು ಸಹಜವಾಗಿಯೇ ಅಸಮಾಧಾನ ಅವರಲ್ಲಿದೆ.
ಸರ್ಜಿ ಬಗ್ಗೆ ನಿಮಗೆಷ್ಟು ಗೊತ್ತು?

Dhananjay sarji
ಡಾ.ಧನಂಜಯ ಸರ್ಜಿಗೆ ಸಂಸದ ಬಿ.ವೈ.ರಾಘವೇಂದ್ರ ಶನಿವಾರ ಅಭಿನಂದಿಸಿದರು.

ಡಾ.ಧನಂಜಯ ಸರ್ಜಿ ಅವರು ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಗೊಪ್ಪೆನಹಳ್ಳಿ ಅವರು. ತಮ್ಮ ಎಂಬಿಬಿಎಸ್ ಪದವಿಯನ್ನು 2002ರಲ್ಲಿ ದಾವಣಗೆರೆಯ ಜೆಜೆಎಂಎಂಸಿನಲ್ಲಿ ಪಡೆದಿದ್ದಾರೆ. 2006ರಲ್ಲಿ ಎಂಡಿ (ಮಕ್ಕಳ ತಜ್ಞ) ಮತ್ತು ಪಿಜಿ ಟೀಚರ್ಸ್ (ಡಿಎನ್.ಬಿ ಕೋರ್ಸ್) ಮಾಡಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ ಸರ್ಜಿ ಆಸ್ಪತ್ರೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೇ ಆರ್.ಎಸ್.ಎಸ್ ಸಂಪರ್ಕ
ಧನಂಜಯ ಸರ್ಜಿ ಅವರು 10 ವರ್ಷದವರಿದ್ದಾಗಲೇ ಆರ್.ಎಸ್.ಎಸ್.ನಲ್ಲಿ ಸ್ವಯಂ ಸೇವಕರಾಗಿದ್ದರು. ಹೊನ್ನಾಳಿಯಲ್ಲಿ ಐಟಿಸಿ, ಪುತ್ತೂರಿನಲ್ಲಿ ಓಟಿಸಿ ತರಬೇತಿಯನ್ನು ಪಡೆದಿದ್ದಾರೆ. ಬಸವೇಶ್ವರನಗರ ಶಾಖೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ವಿಕಾಸ ಟ್ರಸ್ಟ್ ಅಧ್ಯಕ್ಷರಾಗಿದ್ದರು.

error: Content is protected !!