5 ತಲೆಮಾರಿಂದ ಮಾತಲ್ಲೇ ಗರೀಬಿ ಹಠಾವೋ ಅಂದುಕೊಂಡು ಬಂದಿದ್ದಾರೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಐದು ತಲೆಮಾರುಗಳಿಂದ ಕೇವಲ ಗರೀಬಿ ಹಠಾವೋ ಅನ್ನುವುದರಲ್ಲೇ ಕಾಲ ಕಳೆದರು. ಅಜ್ಜ, ಅಜ್ಜಿ, ಮಗ, ಸೊಸೆ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದನ್ನು ಹೇಳುತ್ತಲೇ ಬಂದಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ನಗರದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಜನಸೇವಕ್ ಸಮಾವೇಶದಲಿ ಮಾತನಾಡಿದರು.

ದೋ ನಂಬರ್ ಕೀ ಪಾರ್ಟಿ ಎಂದು ಹೀಯಾಳಿಸಿದ್ದರು: ಒಂದು ಕಾಲದಲ್ಲಿ ಬಿಜೆಪಿಯನ್ನು ದೋ ನಂಬರ್ ಕೀ ಪಾರ್ಟಿ ಎಂದು ಹೀಯಾಳಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇದನ್ನು ಸಹಿಸಿಕೊಂಡು, ಸೈದ್ಧಾಂತಿಕವಾಗಿ ಹೋರಾಟ ಮಾಡಿಕೊಂಡು ಬಿಜೆಪಿ ಇಂದು ಗಟ್ಟಿಯಾಗಿದೆ ಎಂದು ಹೇಳಿದರು.
ದೇಶದಲ್ಲಿಂದು ಬಿಜೆಪಿ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮ ಮಟ್ಟದಲ್ಲೂ ಬಿಜೆಪಿಯ ಸಂಘಟನೆಯ ಬಲಿಷ್ಠವಾಗಿದೆ ಎಂದರು.
ಸಿಎಎ ಬಗ್ಗೆಯೂ ಅಪಪ್ರಚಾರ: ಸಿಎಎ ಕಾಯ್ದೆ ಜಾರಿಗೆ ತಂದು ನಂತರ ಪಾಕಿಸ್ತಾನಕ್ಕೆ ಕಳಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಯಿತು. ಯಾರಿಗೆ ಪಾಕಿಸ್ತಾನಕ್ಕೆ ಕಳಿಸಿದ್ದಾರೆ ಎಂದು ಪರಶ್ನಿಸಿದ ಸಿ.ಟಿ.ರವಿ, ಸಿಎಎ ರೀತಿಯೇಬ ಈಗ ಕೃಷಿ ನೀತಿಗೆ ವಿರೋಧಿಸಲಾಗುತ್ತಿದೆ ಎಂದು ಹೇಳಿದರು.

error: Content is protected !!