ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಕ್ಕೆ ಗೃಹಿಣಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಸವಿತಾ (31) ಅವರು ನ್ಯೂ ಮಂಡ್ಲಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಹೇಮಂತ್ ಎಂಬಾತನನ್ನು ಬಂಧಿಸಲಾಗಿದೆ. ಮೂಲತಃ ಜಾವಳ್ಳಿಯವರಾದ ಸವಿತಾ ಅವರಿಗೆ ಹೇಮಂತ್ ಜತೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಈತ ಆಟೋ ಚಾಲಕನಾಗಿದ್ದಾನೆ.
ಇದನ್ನೂ ಓದಿ । ನಕಲಿ ರಸಗೊಬ್ಬರ ಮಾರಾಟ, ಅದರ ಅಡ್ಡಪರಿಣಾಮಗಳೇನು? ದೂರು ನೀಡಲು ಸಂಪರ್ಕಿಸಿ
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ತೆ, ಗಂಡ ಹಾಗೂ ಮೈದುನ ಯೋಗೇಂದ್ರ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೇಮಂತ್ ನನ್ನು ಬಂಧಿಸಲಾಗಿದೆ. ಇನ್ನಿಬ್ಬರ ಹುಡುಕಾಟ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.