
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೇ 2022ನೇ ಸಾಲಿನ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಹುದ್ದೆಗಳಿಗೆ ನೇಮಕಾತಿ ಕುರಿತು ಶಿವಮೊಗ್ಗ ಜಿಲ್ಲೆಗೆ 1:2 ಮುಖ್ಯ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಮೇ 20ರಂದು ಬೆಳಗ್ಗೆ 10 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
READ | ಮಹಿಳಾ ಪಾಲಿಟೆಕ್ನಿಕ್’ನಲ್ಲಿ ಸ್ಪಾಟ್ ಅಡ್ಮಿಷನ್, ಯಾವೆಲ್ಲ ಕೋರ್ಸ’ಗಳಿಗೆ ಪ್ರವೇಶ?
ನಗರದ ಬಿ.ಎಚ್.ರಸ್ತೆಯಲ್ಲಿರುವ ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇಲ್ಲಿ ದಾಖಲಾತಿಪತಿಶೀಲನೆ ನಡೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳು ಈಗಾಗಲೇ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸಿದ್ದ ಎಲ್ಲ ಮೂಲ ದಾಖಲೆಗಳೊಂದಿಗೆ ಹಾಗೂ ಎಲ್ಲ ದಾಖಲೆಗಳ ಒಂದು ಸೆಟ್ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಪ್ಲಾಸ್ಟಿಕ್ ಫೈಲ್‍ನಲ್ಲಿ ಸಕಾಲದಲ್ಲಿ ಸೂಚಿತ ಸ್ಥಳದಲ್ಲಿ ಹಾಜರಾಗಲು ತಿಳಿಸಿದೆ.
ಮೇ 20 ರಂದು ಆಂಗ್ಲ ಭಾಷೆ ಕ್ರ.ಸಂ.: 1-48, ಗಣಿತ ಮತ್ತು ವಿಜ್ಞಾನ (ಕ.ಮಾ) ಕ್ರ.ಸಂ.: 1-57 ಮತ್ತು ಕ್ರ.ಸಂ.: 115-166 ಹಾಗೂ ಜೀವ ವಿಜ್ಞಾನ (ಕ.ಮಾ) ಕ್ರ.ಸಂ.: 1-64. ಅಂದು ಮಧ್ಯಾಹ್ನ ಸಮಾಜ ಪಾಠಗಳು (ಕ.ಮಾ) ಕ್ರ.ಸಂ.: 1-36 ಹಾಗೂ ಗಣಿತ ಮತ್ತು ವಿಜ್ಞಾನ (ಉರ್ದು.ಮಾ) ಕ್ರ.ಸಂ.: 1-10, ಗಣಿತ ಮತ್ತು ವಿಜ್ಞಾನ (ಕ.ಮಾ) ಕ್ರ.ಸಂ.: 58-114 ಮತ್ತು ಕ್ರ.ಸಂ.: 167-227 ಹಾಗೂ ಜೀವ ವಿಜ್ಞಾನ (ಕ.ಮಾ) ಕ್ರ.ಸಂ.: 65-127 ರವರೆಗೆ ದಾಖಲೆ ಪರಿಶೀಲನೆವಿರುತ್ತದೆ ಎಂದು ತಿಳಿಸಿದ್ದಾರೆ.
ಜನರ ಬಾಯಿಗೆ ಸಿಕ್ಕಿ ದಾರಿ ತಪ್ಪಿದ `ಅಡ್ಡೇಟಿಗೊಂದು ಗುಡ್ಡೇಟು’, ಹಾಗಾದರೆ ಸರಿ ಪದವೇನು, ಏನಿದರ ಅರ್ಥ