Admission | ಮಹಿಳಾ ಪಾಲಿಟೆಕ್ನಿಕ್’ನಲ್ಲಿ ಸ್ಪಾಟ್ ಅಡ್ಮಿಷನ್, ಯಾವೆಲ್ಲ‌ ಕೋರ್ಸಿಗೆ ಎಷ್ಟು ಸೀಟ್ ಲಭ್ಯ?

Public Notice

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್’ನಲ್ಲಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸೀಟುಗಳನ್ನು ಪ್ರಾಂಶುಪಾಲರ ಹಂತದಲ್ಲಿಯೇ(ಸ್ಪಾಟ್ ಅಡ್ಮಿಷನ್)ಭರ್ತಿ ಮಾಡಲು ಮೇ 9 ರಿಂದ ಮೇ 31 ರವರೆಗೆ ನೇರವಾಗಿ ಪ್ರವೇಶ ನೀಡಲಾಗುವುದು.

READ | ಸ್ನೇಕ್ ಕಿರಣ್’ಗೆ ಹಾವು ಕಡಿತ, ಆಸ್ಪತ್ರೆಗೆ ದಾಖಲು

ಕೋರ್ಸ್’ಗಳ ವಿವರ
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್- 63 ಸೀಟುಗಳು. ಕಮರ್ಷಿಯಲ್ ಪ್ರಾಕ್ವೀಸ್(ಕನ್ನಡ)- 33 ಸೀಟುಗಳು. ಕಮರ್ಷಿಯಲ್ ಪ್ರಾಕ್ವೀಸ್(ಆಂಗ್ಲ)- 32 ಸೀಟುಗಳು. ಆಪರಲ್ ಡಿಸೈನ್ & ಫ್ಯಾಬ್ರಿಕೇಷನ್ ಟೆಕ್ನಾಲಜಿ- 63 ಸೀಟುಗಳು ಲಭ್ಯ ಇವೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸುವುದು. ಪ್ರವೇಶ ವೇಳೆ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ ಎನ್‍ಓಸಿ, 5 ವರ್ಷದ ವ್ಯಾಸಂಗ ಪ್ರಮಾಣ ಪತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳವರ ದೃಢೀಕರಿಸಿದ ಸಹಿಯೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಭಾವಚಿತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಿ.ರವಿನಾಯ್ಕ, ಪ್ರಾಂಶುಪಾಲರು, ಮೊ.ಸಂ: 9886610245, ರುದ್ರೇಶ್.ಡಿ.ಎನ್ ಪ್ರವೇಶ ಸಂಪರ್ಕಾಧಿಕಾರಿಗಳು ಮೊ.ಸಂ: 9686396494/ 7975155925 ಇವರುಗಳನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಶಿವಮೊಗ್ಗದ ಈ ಶಾಲೆಯಲ್ಲಿ 1 ರೂಪಾಯಿಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ, ಕಡಿಮೆ ಅಂಕ ಪಡೆದರೂ ಅಡ್ಮಿಷನ್

error: Content is protected !!