ಬಾಲಕಿಯ ಮೇಲೆ ನಡೀತು ಗ್ಯಾಂಗ್ ರೇಪ್, 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ

 

 

ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನಲ್ಲಿ 15 ವರ್ಷದ ಬಾಲಕಿಯ ಮೇಲೆ 30ಕ್ಕೂ ಹೆಚ್ಚು ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
2020ರ ಸೆಪ್ಟೆಂಬರ್ ನಿಂದ ಅತ್ಯಾಚಾರ ಎಸಗಿದ್ದು ಬಾಲಕಿಯನ್ನು ರಕ್ಷಿಸಿ ಚಿಕ್ಕಮಗಳೂರಿನ ಸ್ವಾಧಾರ ಕೇಂದ್ರದಲ್ಲಿ ಸ್ವಾಧಾರ ಕೇಂದ್ರದಲ್ಲಿ ಇರಿಸಲಾಗಿದೆ.
ಶಿಗ್ಗಾವಿ ಮೂಲದ ಬಾಲಕಿಯು ತಾಯಿ ನಿಧನ ನಂತರ ಚಿಕ್ಕಮ್ಮನೊಂದಿಗೆ ಶೃಂಗೇರಿಯಲ್ಲಿ ವಾಸವಾಗಿದ್ದರು.
ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ | ಬಾಲಕಿ ಶೃಂಗೇರಿಯಲ್ಲಿದ್ದಾಗ ವ್ಯಕ್ತಿಯೊಬ್ಬರು ಅತ್ಯಾಚಾರ ಮಾಡಿ ವಿಡಿಯೋ ರೆಕಾರ್ಡ್ ಮಾಡಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಸಹಕಾರ ನೀಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುವುದಾಗಿ ಹೇಳಿದ್ದ ಎನ್ನಲಾಗಿದೆ. ಜತೆಗೆ, ಆತನ ಸ್ನೇಹಿತರು ಮತ್ತು ಪರಿಚಿತರನ್ನು ರೇಪ್ ಮಾಡುವಂತೆ ಸಹಕಾರ ನೀಡಿದ್ದ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿಯು ಶೃಂಗೇರಿ ಪೊಲೀಸರಿಗೆ ಸೂಚನೆ ನೀಡಿದೆ.
ಹಲವರ ಪರಿಚಯವೇ ಗೊತ್ತಾಗಿಲ್ಲ | ಹೇಯ ಕೃತ್ಯ ಎಸಗಿರುವ 15 ಜನರ ಪರಿಚಯ ಗೊತ್ತಾಗಿದೆ. ಇನ್ನುಳಿದವರ ಇನ್ನುಳಿದವರ ಬಗ್ಗೆ ಗೊತ್ತಾಗಿಲ್ಲ ಎಂದು ಗೊತ್ತಾಗಿದೆ.

error: Content is protected !!