ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶ್ರೀರಾಂಪುರ ಶಾಖೆ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿ ಪ್ರಗತಿಯಲ್ಲಿದ್ದು, ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಎಎಫ್ 13 ವ್ಯಾಪ್ತಿಯ ಪ್ರದೇಶಗಳಲ್ಲಿ ಫೆಬ್ರವರಿ 14 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ಕೆ.ಎಚ್.ಬಿ. ಬಡಾವಣೆ, ಮಹಾಲಕ್ಷ್ಮಿ ಲೇಔಟ್, ಗೆಜ್ಜೇನಹಳ್ಳಿ, ಹನುಮಂತನಗರ, ದೇವಕಾತಿಕೊಪ್ಪ, ಅಂಬೇಡ್ಕರ್ ಕಾಲೊನಿ, ಬ್ಶೆರನಕೊಪ್ಪ, ಭೂತನಗುಡಿ ಕ್ಯಾಂಪ್, ಶಿವಸಾಯಿ ಕಾಸ್ಟಿಂಗ್, ಕ್ರಷರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.