ಹುಣಸೋಡು ಬ್ಲಾಸ್ಟ್ | ಪರ್ಮಿಷನ್ ಇರೋದು 23 ಕಲ್ಲು ಕ್ವಾರಿಗೆ ಮಾತ್ರ, ಇನ್ನುಳಿದ ಕಡೆ ಸ್ಫೋಟ ಹೇಗೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ 76 ಕ್ವಾರಿಗಳಿವೆ. ಅವುಗಳಲ್ಲಿ 23 ಕ್ವಾರಿಗಳಲ್ಲಿ ಮಾತ್ರ ಸ್ಫೋಟಿಸಲು ಪರ್ಮಿಷನ್ ಇದೆ. ಆದರೆ, ಇನ್ನುಳಿದ 53 ಕ್ವಾರಿಗಳಲ್ಲಿ ಸ್ಫೋಟ ಮಾಡದೇ ಹೇಗೆ ಕ್ವಾರಿ ನಡೆಸಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳ ಪ್ರಕಾರ ಈ ಅಂಕಿ ಅಂಶವಿದೆ. ಇನ್ನೆಷ್ಟು ಕ್ವಾರಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆಯೋ ಗೊತ್ತಿಲ್ಲ. ರಾಜ್ಯ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಈ ರೀತಿ ಆದರೆ ಹೇಗೆ ಎಂದು ಹೇಳಿದರು.

ರಾಜಕೀಯ ಕುಮ್ಮಕ್ಕು | ಒಂದು ಖುದ್ದು ರಾಜಕಾರಣಿಯಾಗಿರಬೇಕು. ಇಲ್ಲವೇ ರಾಜಕಾರಣಿಗಳ ಬೆಮಬಲ ಇರಬೇಕು. ಹೀಗಾದಾಗ ಮಾತ್ರ ಅಕ್ರಮವಾಗಿ ಗಣಿಗಾರಿಕೆಗಳನ್ನು ನಡೆಸಲು ಸಾಧ್ಯ. ಶಿವಮೊಗ್ಗ ಜಿಲ್ಲೆಯಲ್ಲಿ ಆಡಲಿತ ಪಕ್ಷದ ಮುಖಂಡರದ್ದೇ ಸಾಕಷ್ಟು ಕಲ್ಲು ಗಣಿಗಳಿವೆ. ಇದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಎಂದು ಆರೋಪಿಸಿದರು.

siddaramaiahಹುಣಸೋಡು ಸ್ಫೋಟ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ. ಇದರ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸಲಾಗುವುದು. ಪ್ರಭಾವಿಗಳಿದ್ದರೂ ಪ್ರಕರಣದ ಸತ್ಯಾಂಶಗಳು ಹೊರಬೇಕು.
ಸಿದ್ದರಾಮಯ್ಯ, ಮಾಜಿ ಸಿಎಂ

ಪಕ್ಷಾತೀತವಾಗಿ ತನಿಖೆ ನಡೆಯಲಿ | ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಯನಿಖೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಎಂಬುವುದು ಬೇಡ. ಯಾರ ಅಧಿಕಾರದ ಅವಧಿಯಲ್ಲಿ ಏನೇನು ನಡೆದಿದೆ. ಅಕ್ರಮ ಗಣಿಗಾರಿಕೆಗಳಿವೆ. ತನಿಖೆ ನಡೆಯಲಿದೆ. ಎಲ್ಲದಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

error: Content is protected !!