ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಂಡ್ಲಿ, ಗಾಜನೂರು ಮತ್ತು ರಾಮಿನಕೊಪ್ಪ ವಿದ್ಯುತ್ ವಿತರಣ ಕೇಂದ್ರಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ಜನವರಿ 10 ಮತ್ತು 11ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ: ಗಾಜನೂರು, ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಹೊಸಹೊನ್ನಾಪುರ, ಅಗಸವಳ್ಳಿ, ಲಕ್ಷ್ಮಿಪುರ, ಹರಕೆರೆ, ಪೇಪರ್ ಪ್ಯಾಕೇಜ್, ಶಂಕರ ಕಣ್ಣಿನ ಆಸ್ಪತ್ರೆ, ಇಲಿಯಾಸ್ ನಗರ, ಹಳೇಮಂಡ್ಲಿ, ಅಮೃತ್ ರೈಸ್ ಮಿಲ್, ಗಂಧರ್ವನಗರ, ಶ್ರೀನಿವಾಸ ಲೇಔಟ್, ಮಂಜುನಾಥ ರೈಸ್ಮಿಲ್, ಬೆನಕೇಶ್ವರ ರೈಸ್ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ನಾರಾಯಣ ಹೃದಯಾಲಯ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸುಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮೆಸ್ಕಾಂ ಪ್ರಕಟಣೆ ಕೋರಿದೆ.