ಸುದ್ದಿ ಕಣಜ.ಕಾಂ | DISTRICT | 24 AUG 2022
ಶಿವಮೊಗ್ಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಜಿಲ್ಲಾ ಪಂಚಾಯಿತಿ ವತಿಯಿಂದ 2022-23ನೇ ಸಾಲಿನ ಜಿಲ್ಲಾ ವಲಯದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಗ್ರಾಮೀಣ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾರಿಗೆಲ್ಲ ಸಿಗಲಿದೆ ಸೌಲಭ್ಯ?
ಬಂಡವಾಳ ಹೂಡಿಕೆ ಸಹಾಯಧನ, ಹೊಲಿಗೆ ತರಬೇತಿ ಮತ್ತು ಹೊಲಿಗೆ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ ವಿತರಣೆ, ವೃತ್ತಿಪರ/ ವೃತ್ತಿನಿರತ ಗಾರೆ ಮತ್ತು ಬಡಗಿ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ವಿತರಣೆ ಮಾಡಲಾಗುವುದು.
ಸಣ್ಣ ಕೈಗಾರಿಕೆಗಳು ಮತ್ತು ಕುಶಲಕರ್ಮಿಗಳು ಸೇರಿದಂತೆ ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಕಾರ್ಯಕ್ರಮಗಳಡಿ ಸೌಲಭ್ಯ ಪಡೆಯಲು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ವೆಬ್ಸೈಟ್ ಲಿಂಕ್ https://shimoga.nic.in ಇಲ್ಲಿ ಅರ್ಜಿಯನ್ನು ಭರ್ತಿ ಮಾಡಿ ದಾಖಲೆಗಳ ಸಮೇತ ಆಗಸ್ಟ್ 18 ರಿಂದ ಸೆಪ್ಟೆಂಬರ್ 9ರೊಳಗೆ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಕೈಗಾರಿಕಾ ವಿಸ್ತರಣಾಧಿಕಾರಿ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಭದ್ರಾವತಿ ಮೊ.ಸಂ: 9380261275, ಕೈಗಾರಿಕಾ ವಿಸ್ತರಣಾಧಿಕಾರಿ ಹೊಸನಗರ, ಶಿಕಾರಿಪುರ ಮತ್ತು ಸೊರಬ ಮೊ.ಸಂ: 9481743640 ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಸಾಗರ ಮೊ.ಸಂ; 9448401714, ಜಿಲ್ಲಾ ಕಚೇರಿ ದೂ.ಸಂ: 223376 ನ್ನು ಸಂಪರ್ಕಿಸಬಹುದೆಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಜಿ.ಪಂ, ಶಿವಮೊಗ್ಗದ ಉಪ ನಿರ್ದೇಶಕರು ತಿಳಿಸಿದ್ದಾರೆ.
https://suddikanaja.com/2021/11/12/job-fraud-in-shivamogga/