Job News | ಪಿ.ಎಸ್.ಐ ಹುದ್ದೆಗಳಿಗೆ ಅರ್ಜಿ ಆಹ್ವಾನ

 

 

sಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿ.ಎಸ್.ಐ ಸಿವಿಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Other Job News | ಸಂಶೋಧನಾ ವಿಜ್ಞಾನಿ ಹುದ್ದೆ , ಕೆಪಿಟಿಸಿಎಲ್ ನಲ್ಲಿದೆ ಸುವರ್ಣ ಅವಕಾಶ

ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 545 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಪಿ.ಎಸ್.ಐ ನೇಮಕಾತಿ ಸಮಿತಿ ಅಧ್ಯಕ್ಷ ಹಾಗೂ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ । ಖಾಸಗಿ ಶಾಲೆ ಶುಲ್ಕ ನಿಗದಿಗೆ ಡೆಡ್‍ಲೈನ್ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹೇಳಿದ್ದೇನು ಗೊತ್ತಾ?

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಕೆ ಆರಂಭ | ಜನವರಿ 22ರ ಬೆಳಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಫೆಬ್ರವರಿ 22, ಸಂಜೆ 6 ಗಂಟೆ
ಶುಲ್ಕ ಪಾವತಿ ಅಂತಿಮ ದಿನ | ಅಧಿಕೃತ ಬ್ಯಾಂಕ್ ಶಾಖೆಗಳ, ಅಂಚೆ ಕಚೇರಿ ವೇಳೆಯಲ್ಲಿ ಫೆಬ್ರವರಿ 24
ಶುಲ್ಕದ ವಿವರ
ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 500 ರೂಪಾಯಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂಪಾಯಿ
ಅಧಿಸೂಚನೆಗಾಗಿ ವೆಬ್ ಸೈಟ್click here

error: Content is protected !!