
HIGHLIGHTS
- ರಾಜ್ಯದ ಕರಾವಳಿ ಭಾಗಕ್ಕೆ ಸೀಮೆಎಣ್ಣೆ ಪೂರೈಸುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ
- ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಜಂಟಿ ಕಾರ್ಯದರ್ಶಿ ನವನೀತ್ ಕೊಠಾರಿ ಅವರನ್ನು ಭೇಟಿ ಮಾಡಿದ ಸಂಸದರು
ಸುದ್ದಿ ಕಣಜ.ಕಾಂ | DISTRICT | 21 OCT 2022
ಶಿವಮೊಗ್ಗ(Shivamogga): ರಾಜ್ಯದ ಕರಾವಳಿಯ ಜಿಲ್ಲೆಗಳ ಮೀನುಗಾರಿಕೆ ಕೇಂದ್ರದಿಂದ ಸೀಮೆಎಣ್ಣೆ (Kerosene Oil)ಯನ್ನು ಕೂಡಲೆ ರಾಜ್ಯಕ್ಕೆ ಬಿಡುಗಡೆ ಮಾಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಜಂಟಿ ಕಾರ್ಯದರ್ಶಿ ನವನೀತ್ ಕೊಠಾರಿ ಅವರನ್ನು ಗುರುವಾರ ಭೇಟಿ ಮಾಡಿದ ಸಂಸದರು, ಸೀಮೆ ಎಣ್ಣೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ.
21,618 ಕೆಎಲ್ ಸೀಮೆಎಣ್ಣೆ ಮಂಜೂರು ಮಾಡಿ
ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ 2,472 ಕೆಎಲ್ ಮಂಜೂರಾತಿ ನೀಡಿದ್ದು, ಬಾಕಿ ಉಳಿದಿರುವ 21,618 ಕೆಎಲ್ ಸೀಮೆಎಣ್ಣೆಯನ್ನು ಸಹ ಕೂಡಲೇ ಬಿಡುಗಡೆ ಮಾಡಲು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ, ಜಂಟಿ ಕಾರ್ಯದರ್ಶಿಗಳು ಒಂದು ವಾರದ ಒಳಗಾಗಿ ಮಂಜೂರಾತಿ ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.
Food adulteration | ಕಲಬೆರಕೆ ಆಹಾರ ಬ್ರೇಕ್’ಗೆ ಖಡಕ್ ವಾರ್ನಿಂಗ್, ಜಿಲ್ಲಾಧಿಕಾರಿ ನೀಡಿದ ಸೂಚನೆಗಳೇನು?