ಪೋಲಿಯೊ ಹಾಕಲು ನಾಳೆಯಿಂದ ನಿಮ್ಮ ಮನೆಗೆ ಬರಲಿದ್ದಾರೆ ಆರೋಗ್ಯ ಕಾರ್ಯಕರ್ತರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಭಾನುವಾರ ಪೋಲಿಯೊ ಹನಿ ಹಾಕಲಾಗಿದೆ. ಬಿಟ್ಟುಹೋದ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಉದ್ದೇಶದಿಂದ ಫೆಬ್ರವರಿ 1ರಿಂದ ಮೂರು ದಿನಗಳವರೆಗೆ ಮನೆ ಮನೆ ಭೇಟಿ ನೀಡಿ ಪೋಲಿಯೊ ಹಾಕಲಾಗುತ್ತಿದೆ.
ಲಸಿಕೆ ಹಾಕಿಸಿಕೊಳ್ಳದೆ ಉಳಿದಿರುವ ಮನೆ ಮನೆಗಳಿಗೆ ತೆರಳಿ ಪೋಲಿಯೊ ಹಾಕಲಾಗುವುದು. ಈ ಅವಧಿಯಲ್ಲಿ ಜಿಲ್ಲೆಯ 1.38 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಯಂದಿರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದ್ದಾರೆ.

WhatsApp Image 2021 01 31 at 9.23.55 AMವಿವಿಧೆಡೆ ಪೋಲಿಯೊ | ಜಿಲ್ಲೆಯಾದ್ಯಂತ ಭಾನುವಾರ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು. ನಗರದ ರೋಟರಿ ಶಾಲೆಯಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಅವರು ಮಗುವಿಗೆ ಲಸಿಕೆ ಹಾಕಿ ಆಂದೋಲನಕ್ಕೆ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಆಂದೋಲನದ ಅಂಗವಾಗಿ ನಗರದ ರಾಜೇಂದ್ರ ನಗರದ ರೋಟರಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಸಿ ಮಾತನಾಡಿದರು.

ಪೋಲಿಯೊ ಸೋಂಕು ತಗುಲದಂತೆ ಪ್ರಸ್ತುತ ಹಾಕಲಾಗುತ್ತಿರುವ ಲಸಿಕೆಯು ಮಗುವಿನ ಜೀವಿತದ ಅವಧಿಗೆ ಬಹು ಅಮೂಲ್ಯವಾಗಿರಲಿದೆ. ಪೋಷಕರು ಐದು ವರ್ಷದೊಳಗಿನ ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸಿ. ಪ್ರಸ್ತುತ ಸಂದರ್ಭದಲ್ಲಿ ಭಾರತ ಪೋಲಿಯೊ ಮುಕ್ತವಾಗಿದೆ. ಆದರೂ ಈ ಕಾಯಿಲೆ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ.
– ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ

ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮರಳೀಧರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸಿಇಒ ಎಂ.ಎಲ್.ವೈಶಾಲಿ, ಡಿ.ಎಚ್.ಒ ಡಾ.ರಾಜೇಶ್ ಸುರಗೀಹಳ್ಳಿ ಉಪಸ್ಥಿತರಿದ್ದರು.

error: Content is protected !!