ಉಕ್ಕಿನ ನಗರಿಯಲ್ಲಿ ತಲೆ ಎತ್ತಲಿರುವ ಆರ್.ಎ.ಎಫ್ ಘಟಕ ಹೇಗಿರಲಿದೆ? ಬಟಾಲಿಯನ್ ಕೆಲಸವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರ್.ಎ.ಎಫ್. ದಂಗೆ, ಗಲಭೆ ಹಾಗೂ ಪ್ರಕ್ಷಬ್ಧ ಸನ್ನಿವೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಶಾಂತಿ ಕಾಪಾಡುವ ಆಂತರಿಕ ಭದ್ರತಾ ಪಡೆಯ ಕೆಲಸವನ್ನು ನಿರ್ವಹಿಸುತ್ತದೆ. ಇಂತಹ ಪ್ರಮುಖ ಪಡೆಯನ್ನು ಉಕ್ಕಿನ ನಗರಿ ಭದ್ರಾವತಿಗೆ ಮಂಜೂರು ಮಾಡಲಾಗಿದೆ.
ಒಟ್ಟು 50.29 ಹೆಕ್ಟೆರ್ ಜಾಗದಲ್ಲಿ ನಿರ್ಮಾಣ ಆಗಲಿರುವ 97 ಆರ್.ಎ.ಎಫ್ ಬೆಟಾಲಿಯನ್ ಘಟಕ ಸ್ಥಾಪನೆಗೆ 1500 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು.

ಮೊದಲ ಹಂತದಲ್ಲಿ ಕಮಾಂಡಂಟ್, ಡೆಪ್ಯುಟಿ ಕಮಾಂಡಂಟ್ ಸೇರಿದಂತೆ 399 ಪುರುಷ, 56 ಮಹಿಳಾ ಸಿಬ್ಬಂದಿ ಒಟ್ಟು 445 ಸಿಬ್ಬಂದಿ ಈ ಬೆಟಾಲಿಯನ್ ನಲ್ಲಿ ಇರಲಿದ್ದಾರೆ. ನಂತರ 500 ಕ್ಕೂ ಅಧಿಕ ಸಿಬ್ಬಂದಿ ಇಲ್ಲಿ ನೆಲೆಸಲಿದ್ದಾರೆ.

103412145 968708976894184 760610764193821999 nಇವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ ಕೂಡ ಮಾಡುತ್ತಿದೆ. ರಸ್ತೆ ಅಭಿವೃದ್ದಿ ಕಾಮಗಾರಿ, ರೈಲ್ವೆ ಡಿಪೋ ಅಭಿವೃದ್ದಿ ಕಾಮಗಾರಿ, ಬಂದರು ಅಭಿವೃದ್ದಿ ಕಾಮಗಾರಿ ಕೈಗೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆ ಪ್ರಮುಖ ಜಿಯಾಗ್ರಫಿಕಲ್ ಕೇಂದ್ರವಾಗಲಿದೆ. ಅಲ್ಲದೆ ಹೊಸ ಟೌನ್ ಶಿಪ್ ನಿರ್ಮಾಣವಾಗಲಿದೆ. 1 ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಇದರಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಗರ ಅಭಿವೃದ್ದಿ ಹೊಂದಲಿದೆ.
– ಬಿ.ವೈ.ರಾಘವೇಂದ್ರ, ಸಂಸದರು

ಆಂತರಿಕ ಭದ್ರತೆ ಕಾನೂನು ಸುವ್ಯವಸ್ಥೆ ಮೂಲ ಉದ್ದೇಶವಾಗಿಸಿಕೊಂಡಿರುವ ಆರ್.ಎ.ಎಫ್, ಘಟಕ, ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ಘಟಕವಾಗಿದೆ.
ಆರ್.ಎ.ಎಫ್ ಕಾರ್ಯವ್ಯಾಪ್ತಿ: ಕರ್ನಾಟಕದ 31 ಜಿಲ್ಲೆ, ಕೇರಳದ 4 ಜಿಲ್ಲೆಗಳು ಗೋವಾದ 2 ಜಿಲ್ಲೆಗಳು ಲಕ್ಷ ದ್ವೀಪಾದ 1 ಜಿಲ್ಲೆ ಪುದುಚೇರಿಯ 1 ಜಿಲ್ಲೆ ಸೇರಿದಂತೆ 39 ಜಿಲ್ಲೆಗೆ ಸಂಬಂಧ ಪಟ್ಟಂತಹ ರ‌್ಯಾಪಿಡ್ ಆಕ್ಷನ್ ಫೋರ್ಸ್ ಘಟಕವಾಗಿದೆ.

ಇದನ್ನೂ ಓದಿ ।  ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್‍ಗೆ ಅವಕಾಶ, ಸೆಂಟ್ರಲ್ ಜೈಲಿನಿಂದ ವಿನೂತನ ಹೆಜ್ಜೆ

ಮಾರ್ಚ್ ನಲ್ಲಿ ಬಂಡವಾಳ ಹೂಡಿಕೆ ಪ್ರಕ್ರಿಯೆ: ವಿ.ಐ.ಎಸ್.ಎಲ್, ಎಂಪಿಎಂ ಕುರಿತು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಎಂಪಿಎಂ ಹಾಗೂ ವಿ.ಐ.ಎಸ್.ಎಲ್. ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಾಕಷ್ಟು ಮುಂದುವರೆದಿವೆ. ವಿ.ಐ.ಎಸ್.ಎಲ್. ಕಾರ್ಖಾನೆ ಸಂಬಂಧ ಮುಂದಿನ ಆರ್ಥಿಕ ವರ್ಷವಾದ ಮಾರ್ಚ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕಂಪನಿಗಳು ಬಂಡವಾಳ ಹೂಡುವ ಎಲ್ಲ್ಲ ಪ್ರಕ್ರಿಯೆಗಳೂ ಆರಂಭವಾಗಲಿವೆ. ಎಂಪಿಎಂ ಕೂಡ ಅದೇ ಹಾದಿಯಲ್ಲಿ ಸಾಗಿದೆ ಎಂದರು.

error: Content is protected !!