ತಾಯಿಯೊಂದಿಗೆ ಬಂದ ಇಬ್ಬರು ಮಕ್ಕಳ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಯಿಯೊಂದಿಗೆ ಬಂದಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಂಗಳವಾರ ಸಂಭವಿಸಿದೆ.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯ 19 ಸಾವಿರ ಕುಟುಂಬಗಳಿಗೆ ಕಹ್ಕು ಪತ್ರ, ಪ್ರಗತಿಯಲ್ಲಿದೆ ನಂಬರ್ ಹಾಕುವ ಕಾರ್ಯ

ಭದ್ರಾವತಿ ಮೂಲದ 8 ವರ್ಷದ ಅಶ್ವಿನಿ ಮತ್ತು 4 ವರ್ಷದ ಆಕಾಂಕ್ಷ ಎಂಬುವವರು ಮೃತಪಟ್ಟಿದ್ದಾರೆ. ಮಂಗಳವಾರ ಶಿವಮೊಗ್ಗದಲ್ಲಿರುವ ಗಾಂಧಿ ಪಾರ್ಕ್ ಗೆ ತಾಯಿಯೊಂದಿಗೆ ಬಂದಿದ್ದ ಮಕ್ಕಳು ಅಲ್ಲಿ ಜ್ಯೂಸ್ ಸೇವಿಸಿದ್ದಾರೆ. ನಂತರ, ಬಸ್ ನಿಲ್ದಾಣಕ್ಕೆ ಹೋಗುವ ಹೊತ್ತಿಗೆ ಬಾಯಿಯಲ್ಲಿ ನೊರೆ ಬಂದಿದ್ದು, ಮಕ್ಕಳಿಬ್ಬರೂ ಅಸ್ವಸ್ಥರಾಗಿದ್ದಾರೆ.
ತಕ್ಷಣ ಅಲ್ಲಿಯೇ ಇದ್ದ ಆಟೋ ಚಾಲಕರು ಅಸ್ವಸ್ಥ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನೆಗೆ ಕಾರಣವಿನ್ನೂ ತಿಳಿದುಬಂದಿಲ್ಲ. ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!