ಉಪ್ಪಾರರ ಕುಲಶಾಸ್ತ್ರೀಯ ಕುರಿತು ವಿಚಾರ ಸಂಕಿರಣ, ಎಲ್ಲಿ, ಯಾರು ಭಾಗವಹಿಸಲಿದ್ದಾರೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರದ ಡಿ.ದೇವರಾಜ ಅರಸು ಸಂಶೋಧನ ಸಂಸ್ಥೆ ಪ್ರಾಯೋಜಿತ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ಕುರಿತು ಹೊಸದುರ್ಗದ ಬ್ರಹ್ಮ ವಿದ್ಯಾನಗರದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಮಠದಲ್ಲಿ ಜನವರಿ 20ರಿಂದ 24ರ ವರೆಗೆ ವಿಚಾರ ಸಂಕಿರಣ ಕಾರ್ಯಗಾರ ಏರ್ಪಡಿಸಲಾಗಿದೆ.

ಮಠದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಕಾರ್ಯಾಗಾರದ ಸಾನ್ನಿಧ್ಯ ವಹಿಸಲಿದ್ದಾರೆ. ನಾಡಿನ ಸಾಹಿತಿ ಸಂಪನ್ಮೂಲ ವ್ಯಕ್ತಿಗಳಿಂದ ಉಪ್ಪಾರರ ಕ್ಷೇತ್ರ ಕಾರ್ಯಾಧಾರಿತ ವಿವಿಧ ವಿಷಯ ಕುರಿತು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಊಟ, ವಸತಿ ಉಚಿತ: ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದೆಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಆರ್. ಸತ್ಯನಾರಾಯಣ ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೊಸದುರ್ಗ ಭಗೀರಥ ಮಠ ಮೊಬೈಲ್ ಸಂಖ್ಯೆ 9900337633 ಸಂಪರ್ಕಿಸಬಹುದು.

error: Content is protected !!