ಭದ್ರಾವತಿ | ವಿಐಎಸ್‍ಎಲ್ ಕಾರ್ಖಾನೆಯಲ್ಲಿ ಹಾರ್ಟ್ ಅಟ್ಯಾಕ್‍ನಿಂದ ಕಾರ್ಮಿಕ ಸಾವು, ಕಾರ್ಮಿಕರ ದಿಢೀರ್ ಪ್ರತಿಭಟನೆ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯಲ್ಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಂಥೋನಿ ರಾಜ್ ವ(47) ಎಂಬುವವರೇ ಸಾವನ್ನಪ್ಪಿರುವ ಕಾರ್ಮಿಕರು. ಹೃದಯಾಘಾತವಾಗುತ್ತಿದ್ದಂತೆಯೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಅವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ । ಇನ್ಮುಂದೆ 112ಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ಹಾಜರ್, ಏನಿದು ಡಯಲ್ 112 ಇಲ್ಲಿದೆ ಮಾಹಿತಿ

ಕಾರ್ಖಾನೆ ಎದುರು ಪ್ರತಿಭಟನೆ | ಕರ್ತವ್ಯನಿರತ ಅಂಥೋನಿ ಅವರ ಸಾವಿನಿಂದ ರೊಚ್ಚಿಗೆದ್ದ ಕಾರ್ಮಿಕರು ಕಾರ್ಖಾನೆಯ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ಅಂಥೋನಿ ರಾಜ್ ಅವರ ಕುಟುಂಬಕ್ಕೆ ಪರಿಹಾರ ಕೊಡುವಂತೆ ಒತ್ತಾಯಿಸಿದ್ದಾರೆ.

ಆಕ್ರೋಶಕ್ಕೆ ಕಾರಣ | ಕರ್ತವ್ಯದ ವೇಳೆಯೇ ಅಂಥೋನಿರಾಜ್ ಅವರು ಮೃತಪಟ್ಟಿದ್ದಾರೆ. ಆದರೆ, ನಿಯಮಾನುಸಾರ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಅಪಘಾತಕ್ಕೆ ಒಳಪಟ್ಟಲ್ಲಿ ಮಾತ್ರ ಪರಿಹಾರ ನೀಡಲು ಸಾಧ್ಯ ಎಂದು ಆಡಳಿತ ಮಂಡಳಿಯು ಪ್ರತಿಪಾದಿಸಿದೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಪ್ರತಿಭಟನೆಯ ಹದಿ ತುಳಿದಿದ್ದಾರೆ. ಈ ವೇಳೆ, ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪುತ್ರ ಅಜೀತ್ ಅಪ್ಪಾಜಿಗೌಡ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಜೊತೆ ಮಾತನಾಡಿದರು.

error: Content is protected !!