ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಮ ಮಂದಿರಕ್ಕೆ ಹಣ ನೀಡದಿರುವ ಮನೆಗಳ ಮಾರ್ಕ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಮುಕ್ತವಾಗಿ ಮಾತಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ನಡೆದಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರವಾಸ ಕೈಗೊಳ್ಳಲಾಗುವುದು. 30 ಜಿಲ್ಲೆಗಳಲ್ಲಿ ಪಕ್ಷದ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ನಗರದಲ್ಲಿ ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಉಪ ಚುನಾವಣೆಗಳಲ್ಲಿ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಂದ ಅಂತರ ಕಾಪಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರವಲ್ಲ, ಬಿಎಸ್ ವೈ ಫ್ಯಾಮಿಲಿ ಸರ್ಕಾರ | ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಬಿ.ಎಸ್.ವೈ. ಫ್ಯಾಮಿಲಿ ಸರ್ಕಾರ ಎಂದು ಆರೋಪಿಸಿದರು.
ಧ್ವನಿ ಎತ್ತಿದರೆ ಕೇಸ್ ಹಾಕ್ತಾರೆ | ರಾಜ್ಯದ ಸಂಪತ್ತು ದುರ್ಬಳಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆಯೇ ಕೇಸ್ ದಾಖಲಿಸಲಾಗಿದೆ ಎಂದು ಟೀಕಿಸಿದರು. ಭೋಜೇಗೌಡ, ಎಂ. ಶ್ರೀಕಾಂತ್, ನಾಗರಾಜ್ ಕಂಕಾರಿ ಉಪಸ್ಥಿತರಿದ್ದರು.